ಇಐಎ 2020 'ವಿನಾಶಕಾರಿ', ರದ್ದುಗೊಳಿಸಲು ಸೋನಿಯಾ, ರಾಹುಲ್ ಒತ್ತಾಯ

ಕರಡು ಪರಿಸರ ಪರಿಣಾಮದ ಮೌಲ್ಯಮಾಪನ(ಇಐಎ) 2020 'ಪರಿಸರದ ಮೇಲೆ ಪರಿಣಾಮ ಬೀರುವ 'ವಿನಾಶಕಾರಿ' ಕಾನೂನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದು, ನಿಯಮಗಳು ಮತ್ತು ಅದರ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ.

Published: 13th August 2020 03:17 PM  |   Last Updated: 13th August 2020 04:23 PM   |  A+A-


Sonia-Rahul

ಸೋನಿಯಾ-ರಾಹುಲ್

Posted By : Vishwanath S
Source : UNI

ನವದೆಹಲಿ: ಕರಡು ಪರಿಸರ ಪರಿಣಾಮದ ಮೌಲ್ಯಮಾಪನ(ಇಐಎ) 2020 'ಪರಿಸರದ ಮೇಲೆ ಪರಿಣಾಮ ಬೀರುವ 'ವಿನಾಶಕಾರಿ' ಕಾನೂನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದು, ನಿಯಮಗಳು ಮತ್ತು ಅದರ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ದಿನಪತ್ರಿಕೆಯ ಲೇಖನವೊಂದರಲ್ಲಿ, ಈ ಕುರಿತು ತಿಳಿಸಿರುವ ಸೋನಿಯಾ, 2020ರ ಅಧಿಸೂಚನೆ, ವಿನಾಶಕಾರಿ ಕರಡು ಪರಿಸರ ಪರಿಣಾಮದ ಮೌಲ್ಯಮಾಪನ (ಇಐಎ), ಪರಿಸರ ನಿಯಮಗಳನ್ನು ಉಲ್ಲಂಘಿಸುವ ಮಾಲಿನ್ಯಕಾರರಿಗೆ ಕ್ಲೀನ್ ಚಿಟ್ ನೀಡುತ್ತದೆ ಎಂದಿದ್ದಾರೆ.

ಭಾರತದ ಪರಿಸರ ನಿಯಮಗಳನ್ನು ಕಿತ್ತುಹಾಕುವುದನ್ನು ಸರ್ಕಾರ ನಿಲ್ಲಿಸಬೇಕು. ಕರಡು ಇಐಎ 2020 ಅಧಿಸೂಚನೆಯನ್ನು ಹಿಂಪಡೆಯುವುದು ಅತ್ಯಗತ್ಯ ಮೊದಲ ಹಂತವಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧದ ಯುದ್ಧದಲ್ಲಿ ಭಾರತವನ್ನು ಮುಂಚೂಣಿಯಲ್ಲಿಡುವ ರಾಷ್ಟ್ರೀಯ ಕಾರ್ಯಸೂಚಿಯನ್ನು ರೂಪಿಸಲು ವ್ಯಾಪಕವಾದ ಸಾರ್ವಜನಿಕ ಸಮಾಲೋಚನೆ ಅತ್ಯಗತ್ಯ.

ಬಂಡವಾಳಶಾಹಿಗಳಿಗೆ ಸರ್ಕಾರವು ರೆಡ್ ಕಾರ್ಪೆಟ್ ಹಾಸುತ್ತಿದೆ ಎಂದು ಆರೋಪಿಸಿರು ಸೋನಿಯಾ, ದುರ್ಬಲರನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. ಸುಧಾರಣೆಗಳ ಹೆಸರಿನಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಕುರಿತ ದೇಶೀಯ ಮತ್ತು ಅಂತರರಾಷ್ಟ್ರೀಯ ಬದ್ಧತೆಗಳಿಗೆ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಪರಿಸರವನ್ನು ರಕ್ಷಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ಸಾಮಾಜಿಕ ಬಾಧ್ಯತೆ ಇದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಭಾರತದ ಪರಿಸರ ಸಂರಕ್ಷಣಾ ಚೌಕಟ್ಟು ನಿಯಂತ್ರಕ ಹೊರೆಯಲ್ಲ ಮತ್ತು ಸರ್ಕಾರವು ತನ್ನ ಮನಸ್ಥಿತಿಯನ್ನು ಅನುಮತಿಗಳಿಂದ ಅನುಸರಣೆಗೆ ಬದಲಾಯಿಸಲು ಉದ್ಯಮವನ್ನು ಪ್ರೋತ್ಸಾಹಿಸಬೇಕು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯಕ್ಕೆ ಸಬ್ಸಿಡಿ ನೀಡಬೇಕು. ಭಾರತಕ್ಕೆ ಆಧುನಿಕ ಇಐಎ ಚೌಕಟ್ಟು ಬೇಕು ಎಂಬುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ ಇದು ಅತ್ಯುತ್ತಮ ವೈಜ್ಞಾನಿಕ ಜ್ಞಾನ, ವರ್ಧಿತ ಸಾರ್ವಜನಿಕ ಭಾಗವಹಿಸುವಿಕೆ ಮತ್ತು ನಿಯಮಿತ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಆಧರಿಸಿರಬೇಕು. ಒಂದು ಪ್ರದೇಶ ಅಥವಾ ಪರಿಸರ ವಿಜ್ಞಾನದಲ್ಲಿನ ಯೋಜನೆಗಳ ಸಂಚಿತ ಪರಿಣಾಮಗಳ ಪರಿಕಲ್ಪನೆಯಿರಬೇಕು. ಉದಾಹರಣೆಗೆ ‘ಅವಿರಲ ಗಂಗಾ’ ಇಲ್ಲದೆ ‘ನಿರ್ಮಲ ಗಂಗಾ’ ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಸಹ ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಪ್ರಕೃತಿಯನ್ನು ನಾವು ರಕ್ಷಿಸಿದರೆ ಅವಳು ನಮ್ಮನ್ನು ರಕ್ಷಿಸುತ್ತಾಳೆ ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp