ರೈಲು ವಿಳಂಬವಾದರೆ ಖಾಸಗಿ ನಿರ್ವಾಹಕರಿಗೆ ಬೀಳಲಿದೆ ಭಾರೀ ದಂಡ!

ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ  ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ.
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ  ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ.

ವರ್ಷಾದ್ಯಂತವರೆಗೂ ಖಾಸಗಿ ರೈಲು ನಿರ್ವಾಹಕರು ಶೇ.95 ರಷ್ಟು ಸಮಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಅಲ್ಲದೇ ಅವರಿಂದಾಗಿ ರೈಲು ರದ್ದು ಅಥವಾ ಆದಾಯಕ್ಕೆ ಸಂಬಂಧಿಸಿದಂತೆ ತಪ್ಪಾದ ವರದಿ ನೀಡಿದ್ದಲ್ಲಿ ಭಾರೀ ದಂಡವನ್ನು ತೆರಬೇಕಾಗುತ್ತದೆ.
 
ಕರಡು ಪ್ರಕಾರ, ರೈಲು ಒಂದು ವೇಳೆ 15 ನಿಮಿಷ ತಡವಾಗಿ ತಲುಪಿದರೆ ಸಮಯ ಪ್ರಜ್ಞೆ ಕಳೆದುಕೊಂಡಂತೆ ಎಂದು ಪರಿಭಾವಿಸಲಾಗುತ್ತದೆ.ಇಂತಹ ಸಂದರ್ಭದಲ್ಲಿ ಖಾಸಗಿ ನಿರ್ವಾಹಕರು ಪ್ರತಿ ಕಿಲೋ ಮೀಟರ್ ಗೆ 512 ರೂಪಾಯಿಯನ್ನು ತೆರಬೇಕಾಗುತ್ತದೆ. ಇದನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು ಎಂದು ರೈಲ್ವೆ ತಿಳಿಸಿದೆ.

ಒಂದು ವೇಳೆ ಖಾಸಗಿ ರೈಲುಗಳು 10 ನಿಮಿಷ ಮುಂಚಿತವಾಗಿಯೂ ತಲುಪಿದರೂ ನಿರ್ವಾಹಕರು ದಂಡ ಪಾವತಿಸಬೇಕಾಗುತ್ತದೆ. ಖಾಸಗಿ ರೈಲುಗಳಲ್ಲಿ ಸಮಯ ಪ್ರಜ್ಞೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ವೇಳೆ ನಿರ್ವಾಹಕರ ಕಾರಣದಿಂದಾಗಿ ರೈಲು ಸೇವೆ ರದ್ದಾದರೆ ಆದರಿಂದ ಆಗುವ ನಷ್ಟದ ನಾಲ್ಕನೇ ಒಂದು
ಭಾಗದಷ್ಟು ಹಣವನ್ನು ನಿರ್ವಾಹಕರೇ ಪಾವತಿಸಬೇಕಾಗುತ್ತದೆ. ಆದಾಗ್ಯೂ,  ಪ್ರತಿಕೂಲ ಹವಾಮಾನ, ಹಳಿಗಳ ಮೇಲೆ ಜನ, ಜಾನುವಾರಗಳ ಸಂಚಾರ, ಅಪಘಾತ, ಸಾರ್ವಜನಿಕರ ಪ್ರತಿಭಟನೆ, ಕಾನೂನು ಮತ್ತು ಸುವ್ಯವಸ್ಥೆ, ಕಿಡಿಗೇಡಿಗಳ ಕುಕೃತ್ಯ
ಲೆವೆಲ್ ಕ್ರಾಸಿಂಗ್ ಗೇಟ್ ಗಳ ಬಳಿ ಭಾರಿ ದಟ್ಟಣೆ ಮತ್ತಿತರ ಸಂದರ್ಭಗಳಲ್ಲಿ ರೈಲಿನ ವೇಳೆಯಲ್ಲಿ ವ್ಯತ್ಯಾಸವಾದರೆ
ಅದಕ್ಕೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com