ಇಐಎ 2020 ರದ್ದುಗೊಳಿಸಲು ಸೋನಿಯಾ ಒತ್ತಾಯ

ಕರಡು ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್(ಇಐಎ) 2020 'ಪರಿಸರದ ಮೇಲೆ ಪರಿಣಾಮ ಬೀರುವ 'ವಿನಾಶಕಾರಿ' ಕಾನೂನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದು, ನಿಯಮಗಳು ಮತ್ತು ಅದರ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಕರಡು ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ), 2020 'ಪರಿಸರದ ಮೇಲೆ ಪರಿಣಾಮ ಬೀರುವ 'ವಿನಾಶಕಾರಿ' ಕಾನೂನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದು, ನಿಯಮಗಳು ಮತ್ತು ಅದರ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ದಿನಪತ್ರಿಕೆಯ ಲೇಖನವೊಂದರಲ್ಲಿ, ಈ ಕುರಿತು ತಿಳಿಸಿರುವ ಸೋನಿಯಾ, 2020 ರ ಅಧಿಸೂಚನೆ, ವಿನಾಶಕಾರಿ ಕರಡು ಪರಿಸರ ಪರಿಣಾಮದ ಮೌಲ್ಯಮಾಪನ (ಇಐಎ), ಪರಿಸರ ನಿಯಮಗಳನ್ನು ಉಲ್ಲಂಘಿಸುವ ಮಾಲಿನ್ಯಕಾರರಿಗೆ ಕ್ಲೀನ್ ಚಿಟ್ ನೀಡುತ್ತದೆ ಎಂದಿದ್ದಾರೆ. 

ಭಾರತದ ಪರಿಸರ ನಿಯಮಗಳನ್ನು ಕಿತ್ತುಹಾಕುವುದನ್ನು ಸರ್ಕಾರ ನಿಲ್ಲಿಸಬೇಕು. ಕರಡು ಇಐಎ 2020 ಅಧಿಸೂಚನೆಯನ್ನು ಹಿಂಪಡೆಯುವುದು ಅತ್ಯಗತ್ಯ ಮೊದಲ ಹಂತವಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧದ ಯುದ್ಧದಲ್ಲಿ ಭಾರತವನ್ನು ಮುಂಚೂಣಿಯಲ್ಲಿಡುವ ರಾಷ್ಟ್ರೀಯ ಕಾರ್ಯಸೂಚಿಯನ್ನು ರೂಪಿಸಲು ವ್ಯಾಪಕವಾದ ಸಾರ್ವಜನಿಕ ಸಮಾಲೋಚನೆ ಅತ್ಯಗತ್ಯ.

ಬಂಡವಾಳಶಾಹಿಗಳಿಗೆ ಸರ್ಕಾರವು ರೆಡ್ ಕಾರ್ಪೆಟ್ ಹಾಸುತ್ತಿದೆ ಎಂದು ಆರೋಪಿಸಿರು ಸೋನಿಯಾ, ದುರ್ಬಲರನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. ಸುಧಾರಣೆಗಳ ಹೆಸರಿನಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಕುರಿತ ದೇಶೀಯ ಮತ್ತು ಅಂತರರಾಷ್ಟ್ರೀಯ ಬದ್ಧತೆಗಳಿಗೆ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಪರಿಸರವನ್ನು ರಕ್ಷಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ಸಾಮಾಜಿಕ ಬಾಧ್ಯತೆ ಇದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಭಾರತದ ಪರಿಸರ ಸಂರಕ್ಷಣಾ ಚೌಕಟ್ಟು ನಿಯಂತ್ರಕ ಹೊರೆಯಲ್ಲ ಮತ್ತು ಸರ್ಕಾರವು ತನ್ನ ಮನಸ್ಥಿತಿಯನ್ನು ಅನುಮತಿಗಳಿಂದ ಅನುಸರಣೆಗೆ ಬದಲಾಯಿಸಲು ಉದ್ಯಮವನ್ನು ಪ್ರೋತ್ಸಾಹಿಸಬೇಕು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯಕ್ಕೆ ಸಬ್ಸಿಡಿ ನೀಡಬೇಕು. ಭಾರತಕ್ಕೆ ಆಧುನಿಕ ಇಐಎ ಚೌಕಟ್ಟು ಬೇಕು ಎಂಬುದನ್ನು ಯಾರೂ ಅಲ್ಲಗಳೆಯುತ್ತಿಲ್ಲ.   ಆದರೆ ಇದು ಅತ್ಯುತ್ತಮ ವೈಜ್ಞಾನಿಕ ಜ್ಞಾನ, ವರ್ಧಿತ ಸಾರ್ವಜನಿಕ ಭಾಗವಹಿಸುವಿಕೆ ಮತ್ತು ನಿಯಮಿತ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಆಧರಿಸಿರಬೇಕು. ಒಂದು ಪ್ರದೇಶ ಅಥವಾ ಪರಿಸರ ವಿಜ್ಞಾನದಲ್ಲಿನ ಯೋಜನೆಗಳ ಸಂಚಿತ ಪರಿಣಾಮಗಳ ಪರಿಕಲ್ಪನೆಯಿರಬೇಕು. ಉದಾಹರಣೆಗೆ; ಅವಿರಲ ಗಂಗಾ; ಇಲ್ಲದೆ; ನಿರ್ಮಲ ಗಂಗಾ ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com