ದೆಹಲಿ ಸರ್ಕಾರದ ಪ್ಲಾಸ್ಮಾ ಬ್ಯಾಂಕ್ ನಿಂದ 710 ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ನೀಡಿಕೆ!

ದೆಹಲಿ ಸರ್ಕಾರದ ಪ್ಲಾಸ್ಮಾ ಬ್ಯಾಂಕ್ 710 ಕೋವಿಡ್ ರೋಗಿಗಳಿಗೆ ಪ್ಲಾಸ್ಮಾವನ್ನು ನೀಡಿದೆ, 921 ಕೋವಿಡ್ ಚೇತರಿಸಿಕೊಂಡ ರೋಗಿಗಳು ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದೆಹಲಿ: ದೆಹಲಿ ಸರ್ಕಾರದ ಪ್ಲಾಸ್ಮಾ ಬ್ಯಾಂಕ್ 710 ಕೋವಿಡ್ ರೋಗಿಗಳಿಗೆ ಪ್ಲಾಸ್ಮಾವನ್ನು ನೀಡಿದೆ, 921 ಕೋವಿಡ್ ಚೇತರಿಸಿಕೊಂಡ ರೋಗಿಗಳು ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ.

ಪ್ಲಾಸ್ಮಾ ಬ್ಯಾಂಕ್ ಪ್ರಾರಂಭಿಸಲು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಉಪಕ್ರಮವು ಕೋವಿಡ್ ರೋಗಿಗಳಿಗೆ ವರದಾನವಾಗಿದೆ.
ದೆಹಲಿಯಲ್ಲಿ ತೀವ್ರವಾಗಿ ಅನಾರೋಗ್ಯಕ್ಕೊಳಗಾದ ಕೋವಿಡ್-19 ರೋಗಿಗಳ ಚೇತರಿಕೆ ಸುಗಮಗೊಳಿಸಲು ಪ್ಲಾಸ್ಮಾ ಚಿಕಿತ್ಸೆಯು ಸಹಾಯ ಮಾಡುತ್ತದೆ.

ಇಲ್ಲಿಯವರೆಗೆ, ದೆಹಲಿಯ ಆಸ್ಪತ್ರೆಗಳಲ್ಲಿ ರೋಗಿಗಳ ಚೇತರಿಕೆಗೆ ಅನುವು ಮಾಡಿಕೊಡಲು ಸುಮಾರು 710 ಯುನಿಟ್ ಚೇತರಿಕೆಯ ಪ್ಲಾಸ್ಮಾವನ್ನು ಒದಗಿಸಲಾಗಿದೆ.

ಪ್ಲಾಸ್ಮಾ ಪಡೆದ ಕಿರಿಯ ರೋಗಿಯು 18, ಮತ್ತು ಅತ್ಯಂತ ಹಿರಿಯ ರೋಗಿಗೆ 94 ವರ್ಷ. ಸುಮಾರು 522 ಪುರುಷರು ಮತ್ತು 188 ಮಹಿಳಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ದೆಹಲಿ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇವರಲ್ಲಿ 86 ಆರೋಗ್ಯ ಕಾರ್ಯಕರ್ತರು, 209 ಉದ್ಯಮಿಗಳು, ಎಂಟು ಮಾಧ್ಯಮ ಸಿಬ್ಬಂದಿ, 28 ಪೊಲೀಸ್ ಅಧಿಕಾರಿಗಳು, 50 ವಿದ್ಯಾರ್ಥಿಗಳು, 32 ಸರ್ಕಾರಿ ಅಧಿಕಾರಿಗಳು, ಮತ್ತು ದೆಹಲಿಯ ನಿವಾಸಿಗಳಲ್ಲದ ಸೈನಿಕರು, ಸ್ವಯಂ ಉದ್ಯೋಗಿ ವೃತ್ತಿಪರರು ಸೇರಿದಂತೆ 508 ಚೇತರಿಸಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಚೇತರಿಸಿಕೊಂಡ ಸುಮಾರು 14 ರೋಗಿಗಳು ಒಂದಕ್ಕಿಂತ ಹೆಚ್ಚು ಬಾರಿ ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com