ಕೋವಿಡ್-19 ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಶಾಲೆ ಆರಂಭಿಸಿದ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೊಟೀಸ್ 

ಕೋವಿಡ್-19 ನ ಈ ಸಂಕಷ್ಟ ಕಾಲದಲ್ಲಿ ದೇಶದ ಯಾವ ರಾಜ್ಯಗಳಲ್ಲಿಯೂ ಇನ್ನೂ ಶಾಲೆ ಆರಂಭವಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆ ಆರಂಭಿಸುವುದು ಹೇಗೆ ಎಂಬ ಚಿಂತೆಯಲ್ಲಿ ಸರ್ಕಾರಗಳಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಕೋವಿಡ್-19 ನ ಈ ಸಂಕಷ್ಟ ಕಾಲದಲ್ಲಿ ದೇಶದ ಯಾವ ರಾಜ್ಯಗಳಲ್ಲಿಯೂ ಇನ್ನೂ ಶಾಲೆ ಆರಂಭವಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆ ಆರಂಭಿಸುವುದು ಹೇಗೆ ಎಂಬ ಚಿಂತೆಯಲ್ಲಿ ಸರ್ಕಾರಗಳಿವೆ.

ಇಂತಹದ್ದರ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಶಾಲೆ ಆರಂಭಿಸಿ ಶೋಕಾಸ್ ನೊಟೀಸ್ ಪಡೆದುಕೊಂಡಿದ್ದಾರೆ. ಶಾಲೆ ಆರಂಭಿಸಿದ್ದಾರೆ ಎಂಬ ವಿಷಯ ಶಿಕ್ಷಣ ಇಲಾಖೆಗೆ ಗೊತ್ತಾಗುತ್ತಿದ್ದಂತೆ ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ ಮಿಡ್ನಾಪುರ್ ಜಿಲ್ಲೆಯ ಘಾಟಾಲ್ ನಲ್ಲಿರುವ ಬಿ ಸಿ ರಾಯ್ ಶಾಲೆಗೆ ಹೋಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ಶಾಲಾ ಇನ್ಸ್ ಪೆಕ್ಟರ್ ಅವರ ಪ್ರಾಥಮಿಕ ತನಿಖೆ ಪ್ರಕಾರ ಶಾಲಾ ಮುಖ್ಯೋಪಾಧ್ಯಾಯ ಬ್ರಿಂದಬನ್ ಘಾಟಕ್ ಅವರಿಗೆ ಶೋಕಾಸ್ ನೊಟೀಸ್ ನೀಡಲಾಗಿದೆ. ಆನ್ ಲೈನ್ ತರಗತಿಗಳನ್ನು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಲವು ಮಕ್ಕಳ ಪೋಷಕರಲ್ಲಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಮೊಬೈಲ್ ನೆಟ್ ವರ್ಕ್ ಕೂಡ ಸರಿಯಾಗಿ ಇರುವುದಿಲ್ಲ. ಹೀಗಾಗಿ ನಾವು 10ನೇ ತರಗತಿಗೆ ಶಾಲೆ ಆರಂಭಿಸಲು ನಿರ್ಧರಿಸಿದೆವು, ಕೆಲವು ಪೋಷಕರು ಕೂಡ ನಮಗೆ ಶಾಲೆ ಆರಂಭಿಸಲು ಮನವಿ ಮಾಡಿಕೊಂಡರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಬ್ರಿಂದಬನ್ ಘಾಟಕ್ ತಿಳಿಸಿದ್ದಾರೆ.

ಮಂಗಳವಾರ ಇಂಗ್ಲಿಷ್ ಮತ್ತು ವಿಜ್ಞಾನ ತರಗತಿಗಳಿಗೆ ಹತ್ತನೇ ತರಗತಿ ಮಕ್ಕಳಿಗೆ ಶಾಲೆಗೆ ಬರಲು ಹೇಳಲಾಗಿತ್ತು. 150 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಬಂದಿದ್ದರು, 37 ಶಿಕ್ಷಕರಲ್ಲಿ 25 ಶಿಕ್ಷಕರು ಶಾಲೆಗೆ ಬಂದಿದ್ದರು, ಸಾಮಾಜಿಕ ಅಂತರ ಕಾಯ್ದುಕೊಂಡು 3 ಗಂಟೆಗಳ ಕಾಲ ತರಗತಿ ನಡೆಸಲಾಗಿತ್ತು ಎನ್ನುತ್ತಾರೆ ಶಿಕ್ಷಕರೊಬ್ಬರು. 

ರಾಜ್ಯ ಸರ್ಕಾರದ ನಿಯಮ ಮೀರಿ ಶಾಲಾ ಮುಖ್ಯೋಪಾಧ್ಯಾಯರು ತರಗತಿ ನಡೆಸಿದ್ದಾರೆ ಎಂದು ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com