ದೆಹಲಿ: ಲಾಕ್ ಡೌನ್ ನಂತರ ವಿಪರೀತ ಜಿಮ್ ವ್ಯಾಯಮದಿಂದ ಕಿಡ್ನಿ ತೊಂದರೆಗೊಳಗಾದ ಯುವಕ!

 ಲಾಕ್ ಡೌನ್ ನಂತರ ಜಿಮ್ ನಲ್ಲಿ ವಿಪರೀತ ವ್ಯಾಯಮ ಮಾಡಿದ 18 ವರ್ಷದ ಯುವಕನೊಬ್ಬನೊಬ್ಬ ಇದೀಗ ದುಬಾರಿ ಬೆಲೆ ತೆರಬೇಕಾಗಿದೆ.ಆತನ ಎರಡು ಕಿಡ್ನಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಲಾಕ್ ಡೌನ್ ನಂತರ ಜಿಮ್ ನಲ್ಲಿ ವಿಪರೀತ ವ್ಯಾಯಮ ಮಾಡಿದ 18 ವರ್ಷದ ಯುವಕನೊಬ್ಬನೊಬ್ಬ ಇದೀಗ ದುಬಾರಿ ಬೆಲೆ ತೆರಬೇಕಾಗಿದೆ.ಆತನ ಎರಡು ಕಿಡ್ನಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

ಅನ್ ಲಾಕ್ 3 ಜಾರಿಯಾದ ನಂತರ ನಗರದಲ್ಲಿ ಜಿಮ್ ನಿಧಾನವಾಗಿ ಪುನರ್ ಆರಂಭವಾಗುತ್ತಿದ್ದಂತೆ  ತಿಂಗಳುಗಟ್ಟಲೇ
ಮನೆಯಲ್ಲಿದ್ದ ಜನರು ವ್ಯಾಯಾಮ ಮಾಡಲು ದೌಡಾಯಿಸುತ್ತಿರುವುದಾಗಿ ಪ್ರಮುಖ ಖಾಸಗಿ ಆಸ್ಪತ್ರೆಯೊಂದು
ಹೇಳಿದೆ.

ಒಂದು ತಿಂಗಳು ಮನೆಯಲ್ಲಿದ್ದು, ನಂತರ ವಿಪರೀತ ವ್ಯಾಯಾಮ ಮಾಡಿದ್ದರಿಂದ 18 ವರ್ಷದ ಲಕ್ಷ್ಯ ಬಿಂದ್ರಾನ 
ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜಿಮ್ ಪುನರ್ ಆರಂಭವಾಗುತ್ತಿದ್ದಂತೆ ಬೆಳಗ್ಗೆ ಹಾಗೂ ಸಂಜೆ
ಒಂದು ತಾಸು ಜಿಮ್ ನಲ್ಲಿ ಬೆವರು ಹರಿಸಿದ್ದರಿಂದ ವಾಂತಿ ಜೊತೆಗೆ ಸ್ನಾಯು ತೊಂದರೆ, ದೇಹದಲ್ಲಿ ನೋವು ಕಂಡುಬಂದಿದೆ
ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲಿಯೇ ಮೂರು ದಿನಗಳ ಕಾಲ ತೊಂದರೆ ಅನುಭವಿಸಿದ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಆಸ್ಪತ್ರೆಗೆ
ಬಿಂದ್ರಾನನ್ನು ಆಸ್ಪತ್ರೆಗೆ ಸೇರಿಸಲಾಯಿತು.ಆಸ್ಪತ್ರೆಗೆ ಆತ ಬಂದಾಗ ಮೂತ್ರ ಉತ್ಪಾದನೆ ಕಡಿಮೆಯಾಗಿದ್ದು, ಕಿಡ್ನಿ ಹಾಗೂ
ಪಿತ್ತಕೋಶದ ಅಸಮರ್ಪಕ ಕಾರ್ಯನಿರ್ವಹಣೆ ಕಂಡುಬಂದಿತು ಎಂದು ಕಿಡ್ನಿ ಕಸಿ ವಿಭಾಗದ  ಹಿರಿಯ ಸಮಾಲೋಚಕ 
ದಿಲೀಪ್ ಬಲ್ಲಾ ಹೇಳಿದ್ದಾರೆ.

ರೋಗಿಯನ್ನು ತಕ್ಷಣ ಐಸಿಯುಗೆ ಸೇರಿಸಲಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ. ಸ್ನಾಯು ತೊಂದರೆ ಶಮನ ಪಡಿಸಲು 
ಕೆಲ ದಿನ ಫಿಜಿಯೋಥೆರಪಿ ನೀಡಲಾಗಿತ್ತು. ಕಿಡ್ನಿಗಳ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಲು ಎರಡು ಬಾರಿ
ಡಯಲಿಸಿಸ್ ನಡೆಸಲಾಗಿದೆ. ಇದೀಗ ಬಿಂದ್ರಾನ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ ಎಂದು ಬಲ್ಲಾ ತಿಳಿಸಿದ್ದಾರೆ.

ವಿಪರೀತ ಜಿಮ್ ಆರೋಗ್ಯಕ್ಕೆ ಒಳ್ಳೆಯದಲ್ಲ,  ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಮಾಲೋಚಕ
ಅಬ್ಬಾಸ್ ಅಲಿ ಕಾಟೈ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com