ಒಂದೇ ತಿಂಗಳಲ್ಲಿ 23 ಲಕ್ಷ ಪಿಪಿಇ ಕಿಟ್ ಗಳ ರಫ್ತು: ಜಾಗತಿಕ ಮಟ್ಟದಲ್ಲಿ ಭಾರತ ಸಾಧನೆ

 ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದರೊಂದಿಗೆ ಭಾರತ, 23 ಲಕ್ಷ ಪಿಪಿಇಗಳನ್ನು ಅಮೆರಿಕ, ಯುನೈಟೆಡ್‍ ಕಿಂಗ್‍ಡಮ್‍, ಯುಎಇ, ಸೆನೆಗಲ್ ಮತ್ತು ಸ್ಲೊವೇನಿಯಾಗೆ ರಫ್ತು ಮಾಡುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ.
ಒಂದೇ ತಿಂಗಳಲ್ಲಿ 23 ಲಕ್ಷ ಪಿಪಿಇ ಕಿಟ್ ಗಳ ರಫ್ತು: ಜಾಗತಿಕ ಮಟ್ಟದಲ್ಲಿ ಭಾರತ ಸಾಧನೆ

ನವದೆಹಲಿ: ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದರೊಂದಿಗೆ ಭಾರತ, 23 ಲಕ್ಷ ಪಿಪಿಇಗಳನ್ನು ಅಮೆರಿಕ, ಯುನೈಟೆಡ್‍ ಕಿಂಗ್‍ಡಮ್‍, ಯುಎಇ, ಸೆನೆಗಲ್ ಮತ್ತು ಸ್ಲೊವೇನಿಯಾಗೆ ರಫ್ತು ಮಾಡುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ.

ಸರ್ಕಾರದ ಈ ಕ್ರಮ, ಆತ್ಮನಿರ್ಭರ್ ಭಾರತ್ ಅಭಿಯಾನಯಾದ ಭಾಗವೇ ಆಗಿರುವ "ಮೇಕ್ ಇನ್ ಇಂಡಿಯಾ" ಮನೋಸ್ಥಿತಿಯ ಒಂದು ಭಾಗವಾಗಿದ್ದು, ಇದರ ಪರಿಣಾಮವಾಗಿ ಪಿಪಿಇಗಳು ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳನ್ನು ಉತ್ಪಾದಿಸಿ, ರಪ್ತು ಮಾಡುವುದರಲ್ಲಿ ಯಶಸ್ಸು ಸಾಧಿಸಲಾಗುತ್ತಿದೆ. ಕೇಂದ್ರ ಸರ್ಕಾರ ಪಿಪಿಇಗಳು, ಎನ್ 95 ಮುಖಗವಸುಗಳು ಮತ್ತು ವೆಂಟಿಲೇಟರ್‌ಗಳನ್ನು ರಾಜ್ಯಗಳಿಗೆ ಪೂರೈಸುತ್ತಿದೆ.

ಮಾರ್ಚ್ ಮತ್ತು ಆಗಸ್ಟ್ 2020 ರ ನಡುವೆ ದೇಶೀಯವಾಗಿ 1.40 ಕೋಟಿ ಸ್ಥಳೀಯ ಪಿಪಿಇಗಳನ್ನು ಉತ್ಪಾದಿಸಲಾಗಿದೆ. ಕೇಂದ್ರ ಸರ್ಕಾರ 1.28 ಕೋಟಿ ಪಿಪಿಇಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com