ಕರ್ನಾಟಕದ ಬಿಜೆಪಿ ಜಿಲ್ಲಾ ಕಚೇರಿಗಳಿಗೆ ಅಧ್ಯಕ್ಷ ಜೆಪಿ ನಡ್ಡಾ ಶಿಲಾನ್ಯಾಸ!

2014ರಲ್ಲಿ ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಗೆ ತನ್ನದೇ ಆದ ಕಚೇರಿ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದರು. ಅದರಂತೆ ರಾಜ್ಯಗಳಲ್ಲಿ ಬಿಜೆಪಿ ಜಿಲ್ಲಾ ಕಚೇರಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. 
ಜೆಪಿ ನಡ್ಡಾ
ಜೆಪಿ ನಡ್ಡಾ

ನವದೆಹಲಿ: 2014ರಲ್ಲಿ ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಗೆ ತನ್ನದೇ ಆದ ಕಚೇರಿ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದರು. ಅದರಂತೆ ರಾಜ್ಯಗಳಲ್ಲಿ ಬಿಜೆಪಿ ಜಿಲ್ಲಾ ಕಚೇರಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. 

ವರ್ಚುವಲ್ ಸಮಾರಂಭದ ಮೂಲಕ ರಾಜ್ಯದ ಪಕ್ಷದ ಕಚೇರಿಗಳಿಗೆ ಅಡಿಪಾಯ ಹಾಕಿ ನಂತರ ಮಾತನಾಡಿದ ಜೆಪಿ ನಡ್ಡಾ ಅವರು ಲಾಕ್ ಡೌನ್ ಸಮಯದಲ್ಲಿ ರಾಜ್ಯ ಪಕ್ಷದ ಘಟಕದ ಕಲ್ಯಾಣ ಕಾರ್ಯಗಳನ್ನು ಶ್ಲಾಘಿಸಿದರು.

2014ರಿಂದ ಬಿಜೆಪಿ ಕಚೇರಿಗಳ ನಿರ್ಮಾಣ ಕಾರ್ಯಕ್ರಮ ನಡೆಯುತ್ತಿದ್ದು ಪಕ್ಷದಲ್ಲಿ ಈಗ 500 ಕಚೇರಿಗಳಿವೆ. ಪಕ್ಷವು ಭವಿಷ್ಯದಲ್ಲಿ ಇನ್ನೂ 300 ಕಚೇರಿಗಳನ್ನು ಹೊಂದಿರುತ್ತದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.

ಕಚೇರಿ ಕೇವಲ ಕಟ್ಟಡವಲ್ಲ, ಇದು ಸಂಪ್ರದಾಯದ ಕೇಂದ್ರವಾಗಿದೆ ಮತ್ತು ಪಕ್ಷಕ್ಕೆ ಸೇರಲು ಜನರನ್ನು ಪ್ರೇರೇಪಿಸುತ್ತದೆ ಎಂದು ನಡ್ಡಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com