ಆಸ್ತಿಗಾಗಿ ಕೇರಳದಲ್ಲಿ ನಡೀತು ನೀಚಕೃತ್ಯ! ಐಸ್ ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ತಂಗಿಯನ್ನು ಕೊಂದ ಅಣ್ಣನ ಸೆರೆ!

ತನ್ನ 16 ವರ್ಷದ ಸಹೋದರಿ ಆನ್ ಮೇರಿಯ ಹತ್ಯೆ ಮತ್ತು ಆತನ ಪೋಷಕರಾದ ಬೆನ್ನಿ ಒಲಿಕಲ್ ಮತ್ತು ಬೆಸ್ಸಿಯನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ತರಬೇತಿ ಪಡೆದ ಆಟೋಮೊಬೈಲ್ ಮೆಕ್ಯಾನಿಕ್ ಅಲ್ಬಿನ್ ಬೆನ್ನಿ (22) ಎಂಬಾತನನ್ನು  ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆಸ್ತಿಗಾಗಿ ಕೇರಳದಲ್ಲಿ ನಡೀತು ನೀಚಕೃತ್ಯ! ಐಸ್ ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ತಂಗಿಯನ್ನು ಕೊಂದ ಅಣ್ಣನ ಸೆರೆ!

ಕಾಸರಗೋಡು: ತನ್ನ 16 ವರ್ಷದ ಸಹೋದರಿ ಆನ್ ಮೇರಿಯ ಹತ್ಯೆ ಮತ್ತು ಆತನ ಪೋಷಕರಾದ ಬೆನ್ನಿ ಒಲಿಕಲ್ ಮತ್ತು ಬೆಸ್ಸಿಯನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ತರಬೇತಿ ಪಡೆದ ಆಟೋಮೊಬೈಲ್ ಮೆಕ್ಯಾನಿಕ್ ಅಲ್ಬಿನ್ ಬೆನ್ನಿ (22) ಎಂಬಾತನನ್ನು  ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆನ್ ಮೇರಿಯ ಹತ್ಯೆ ನಿರ್ದಯ ಮತ್ತು ಖಂಡನೀಯವೆಂದು ಪ್ರಕರಣದ ತನಿಖೆ ನಡೆಸಿದ ವೆಳ್ಳಾರಿಕುಂಡುವಿನ  ಸ್ಟೇಷನ್ ಹೌಸ್ ಅಧಿಕಾರಿ ಇನ್ಸ್ ಪೆಕ್ಟರ್ ಪ್ರೇಮ್ ಸಾದನ್ ಹೇಳಿದ್ದಾರೆ.

ಆಲ್ಬಿನ್  ಹೇಳುವಂತೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆತ ಮೂರು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿ ಮುಚ್ಚಿಹಾಕಲು ಯೋಜಿಸಿದ್ದರು, ಆದರೆ ಅವರ ಲೆಕ್ಕಾಚಾರ ತಲೆಕೆಳಗಾಗಿದೆ, ಅನ್ ಮೇರಿ ಸಾಯುವುದನ್ನು ಆರೋಪಿ ನೋಡಿದ್ದಾನೆ,

ಘಟನೆ ವಿವರ 

ಜುಲೈ 30, ಗುರುವಾರ, ಅಲ್ಬಿನ್ ತನ್ನ ತಾಯಿ ಬೆಸ್ಸಿ ಮತ್ತು ಸಹೋದರಿ ಆನ್ ಮೇರಿಯನ್ನು ಐಸ್ ಕ್ರೀಮ್ ಮಾಡುವಂತೆ ಕೇಳಿಕೊಂಡಿದ್ದಾನೆ  ಹತ್ತನೇ ತರಗತಿ ಮುಗಿಸಿದ್ದ  ಹೈಯರ್ ಸೆಕೆಂಡರಿ ಶಾಲೆಗೆ ಸೇರಲು ಕಾಯುತ್ತಿದ್ದ ಆನ್ ಮೇರಿ, ಬೋರ್ಬನ್ ಐಸ್‌ಕ್ರೀಮ್ ಅನ್ನು ತಿನ್ನಲು ಬಯ್ಸಿದ್ದಾಳೆ, ವೆಳ್ಳರಕುಂಡುವಿನ ಬೇಕರಿಯೊಂದರಿಂದ  ಪದಾರ್ಥಗಳನ್ನು ಖರೀದಿಸಿದ ಅಲ್ವಿನ್ ಮನೆಯವರು ಸೇರಿ ಎರಡು ಬಕೆಟ್ ನಲ್ಲಿ ಐಸ್ ಕ್ರೀಂ ತಯಾರಿಸಿದ್ದಾರೆ. ನಂತರ ಎರಡನ್ನೂ  ಫ್ರಿಜ್‌ನಲ್ಲಿ ಇಡಲಾಗಿತ್ತುಸಂಜೆಯ ಹೊತ್ತಿಗೆ, ಐಸ್ ಕ್ರೀಮ್ ಸಿದ್ಧವಾಯಿತು ಮತ್ತು ಕುಟುಂಬದ ನಾಲ್ವರು ಸದಸ್ಯರು ಇದನ್ನು ಸೇವಿಸಿದರು. ಆ ರಾತ್ರಿಅಲ್ಬಿನ್, ಫ್ರಿಜ್‌ನಲ್ಲಿ ಕೆಳಗೆ ಇರಿಸಿದ ಐಸ್‌ಕ್ರೀಮ್ ಬಕೆಟ್‌ಗೆ ರಾಟೋಲ್ ಪೇಸ್ಟ್‌ (ವಿಷಕಾರಿ ಅಂಶವಿರುವ ಇಲಿ ಪಾಷಾಣ ) ಅರ್ಧ ಟ್ಯೂಬ್ ನಷ್ಟು ಬೆರೆಸಿದ್ದಾನೆ,

ಇದು ಗೊತ್ತಿರದ ಆನ್ ಮೇರಿ ಜುಲೈ 31 ರ ಬೆಳಿಗ್ಗೆ,  ಎರಡೂ ಬಕೆಟ್‌ಗಳಲ್ಲಿ ಐಸ್‌ಕ್ರೀಮ್ ಬೆರೆಸಿ ಫ್ರಿಜ್ ನಲ್ಲಿಇರಿಸಿದ್ದಾರೆ. ಆ ಸಂಜೆ ತಂದೆ ಮತ್ತು ಮಗಳು ಅದನ್ನು ಸೇವಿಸಿದರು ಆದರೆ ಅಲ್ಬಿನ್ ಮಾತ್ರ ತನಗೆ ಗಂಟಲು ನೋವೆಂದು ಐಸ್ ಕ್ರೀಂ ಸೇವಿಸುವುದರಿಂದ ತಪ್ಪಿಸಿಕೊಂಡ. ಬೆಸ್ಸಿ ಸ್ವಲ್ಪಮಟ್ಟಿಗೆ ಐಸ್ ಕ್ರೀಂ ಸೇವಿಸಿ ರುಚಿಯಲ್ಲಿ ವ್ಯತ್ಯಾಸ ಗುರುತಿಸಿದ್ದಾಳೆ, ಮತ್ತು ಉಳಿದ ಐಸ್‌ಕ್ರೀಮ್‌ಗಳನ್ನು ನಾಯಿಗೆ ಕೊಡುವಂತೆ ಅವಳು ಅಲ್ಬಿನ್‌ನನ್ನು ಕೇಳಿದಳು

ಆಗಸ್ಟ್ 1 ರ ಶನಿವಾರ ಬೆಳಿಗ್ಗೆ, ಆನ್ ಮೇರಿ ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಅತಿಸಾರದ ಸಮಸ್ಯೆ ಕೂಡ ಆಕೆಗೆ ಕಾಣಿಸಿಕೊಂಡಿದೆ, . ಆಕೆಯ ತಂದೆ ಮೊದಲು ಅವಳನ್ನು ಹೋಮಿಯೋಪತಿ ಚಿಕಿತ್ಸಾಲಯಕ್ಕೆ ಮತ್ತು ನಂತರ ವೆಳ್ಳಾರಿಕುಂಡುಸಹಕಾರಿ ಆಸ್ಪತ್ರೆಗೆ ಕರೆದೊಯ್ದರು ಹಲವಾರು ಪರೀಕ್ಷೆಗಳ ನಂತರ, ಆಕೆಯ ಯಕೃತ್ತು ಉತ್ತಮ ಸ್ಥಿತಿಯಲ್ಲಿಲ್ಲದ ಕಾರಣ ಆಕೆಗೆ ಕಾಮಾಲೆ ಇದೆ ಎಂದು ವೈದ್ಯರು ಆಗಸ್ಟ್ 4 ರಂದು ತೀರ್ಮಾನಿಸಿದರು; ಅವಳ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದ್ದವು ಮತ್ತು ಅವಳ ಮೂತ್ರವೂ ಹಳದಿಯಾಗಿತ್ತು,

ಅದೇ ದಿನ, ಬೆನ್ನಿಯ ಅಣ್ಣ ಅನ್ ಮೇರಿಯನ್ನು ಣ್ಣೂರು ಜಿಲ್ಲೆಯ ಚೆರುಪುಳ ಬಳಿಯ ಪುಲಿಂಗೋತ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದರು,ಅಲೋಪತಿಯಲ್ಲಿ ಕಾಮಾಲೆಗೆ ಔಷಧಿ ಇಲ್ಲ, ಅವರ ಮನೆಯ ಬಳಿ ಪರ್ಯಾಯ  ಔಷಧಿ ನಿಡುವ  ಉತ್ತಮ ವೈದ್ಯರಿದ್ದಾರೆ ಎಂದು ಹೇಳಿದರು. ಆದರೆ ಆಕೆಯ ಸ್ಥಿತಿ ಹದಗೆಟ್ಟಿದ್ದು, ಆಗಸ್ಟ್ 5 ರಂದು ಚೆರುಪುಳದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

ಚೆರುಪುಳ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ ಏಕೆಂದರೆ ಆನ್ ಮೇರಿಯ ತಂದೆಯೂ ಸಹ ಇದೇ ರೀತಿಯ ಲಕ್ಷಣಗಳನ್ನು ಹೊಂದಲು ಪ್ರಾರಂಭಿಸಿದ್ದರು, ಇದಕ್ಕಾಗಿ ಅವರನ್ನು ಕಲ್ಲಿಕೋಟೆಯ ಮಿಮ್ಸ್ ಗೆ ಸೇರಿಸಲಾಗಿತ್ತು,ಬೆನ್ನಿಯ 80% ಯಕೃತ್ತು ಹಾನಿಯಾಗಿದೆ ಎಂದು ಹಾಗೂ ಅವರನ್ನು ಯಕೃತ್ತಿನ ಕಸಿ ಮೂಲಕ ಮಾತ್ರ ಉಳಿಸಬಹುದುಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಕಸಿ ಮಾಡಲು ಸುಮಾರು 35 ಲಕ್ಷ ರೂ. ಮತ್ತುಪ್ರತಿ ತಿಂಗಳ ಔಷಧಿಗಾಗಿ  35,000 ರೂ. ಅಗತ್ಯವಿತ್ತು, ಆದರೆ ಹಣವಿಲ್ಲದೆ, ಕುಟುಂಬವು ಬೆನ್ನಿಯನ್ನು ಮರಳಿ ಕರೆತಂದು ಪಯಣ್ಣೂರಿನ ತಾಲೂಕು ಆಸ್ಪತ್ರೆಗೆ ದಾಖಲಿಸಿತು.

ಏತನ್ಮಧ್ಯೆ, ಆನ್ ಮೇರಿಯ ಮರಣೋತ್ತರ ಪರೀಕ್ಷೆಯು ಹಳದಿ ರಂಜಕದ ಉಪಸ್ಥಿತಿಯನ್ನು ಬಹಿರಂಗಪಡಿಸಿತು. ರಾಟೋಲ್ ಪೇಸ್ಟ್‌ ನ ಅಂಶ ಅವಳ ದೇಹದಲ್ಲಿರುವುದು ಪತ್ತೆಯಾಗಿತ್ತು. ವಿಷ ನಿಧಾನವಾಗಿ ಕೆಲಸ ಮಾಡುತ್ತದೆ, ಆದರೆ ಯಕೃತ್ತನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ ಎಂದುಪೋಲೀಸರು ಹೇಳಿದ್ದಾರೆ. "ಈ ಎಲ್ಲಾ ಸಮಯದಲ್ಲಿ, ಅಲ್ಬಿನ್ ಮಾತ್ರ ಮೂಕಪ್ರೇಕ್ಷಕನಂತೆ  ನಿಂತು ತನ್ನ ತಂದೆ ಮತ್ತು ಸಹೋದರಿಯ ಜೀವನ-ಮರಣವನ್ನು ನೋಡುತ್ತಲಿದ್ದ ಹೊರತು ಏನನ್ನೂ ಮಾಡಲಿಲ್ಲ. ಬೆನ್ನಿ ಬದುಕುಳಿದರೆ ಅದು ಪವಾಡವಾಗಿತ್ತು. 

ಪ್ರಕರಣವನ್ನು ವೆಳ್ಳಾರಿಕುಂಡುವಿನ  ವ್ಯಾಪ್ತಿಗೆ ಹಸ್ತಾಂತರಿಸುವ ಮುನ್ನ ಅಲ್ಲೇ ತನಿಖೆ ನಡೆಸುವಂತೆ ಇಲ್ಲಿನ ಪೋಲೀಸರು ಕೇಳಿದ್ದಾರೆ. ಇಲ್ಲಿನ ಪೋಲೀಸರು ಮನೆ ಸೀಲ್ ಮಾಡಿ  ಅಲ್ಬಿನ್ ಅವರ ಮೊಬೈಲ್ ಫೋನ್ ಕಲೆಹಾಕಲು ಯಶಸ್ವಿಯಾಗಿದ್ದಾರೆ.  "ಅವನು ತನ್ನ ಸಂಬಂಧಿಕರ ಮನೆಯಲ್ಲಿಯೇ ಇದ್ದನು ಆದರೆ ನಾವು ಅವನ ಮೇಲೆ ನಿಗಾ ಇಟ್ಟಿದ್ದೇವೆ. ಆತ ಶಂಕಿತನೆಂದು ಅವನಿಗೆ ಸೂಚನೆ ಕೊಟ್ಟಿರಲಿಲ್ಲ. "

ಪೊಲೀಸರು ಆತನ ಫೋನ್ ಕರೆಗಳ ಇತಿಹಾಸವನ್ನು ಪರಿಶೀಲಿಸಿದ್ದಾರೆ. ಆಗ ಅವರಿಗೆ ಇಲಿ ಪಾಷಾಣದ ಬಗ್ಗೆ ಆತ  ಗೂಗಲ್‌ನಲ್ಲಿ ಸರ್ಚ್ ಮಾಡಿರುವ ಅಂಶ ಗೊತ್ತಾಗಿದೆ, ಮತ್ತು ಅದು ಮಾನವ ದೇಹ ಮತ್ತು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದುಆತ ಹುಡುಕಿದ್ದ."ನಂತರ ನಾವು ವೆಳ್ಳಾರಿಕುಂಡುವಿನ   ಅಂಗಡಿಗಳಲ್ಲಿ ಪರಿಶೀಲಿಸಿದ್ದೇವೆ ಮತ್ತು ಆಗಸ್ಟ್ 29 ರಂದು ಅಲ್ಬಿನ್ ತನ್ನ ಅಂಗಡಿಯಿಂದ ಇಲಿ ಪಾಷಾಣವನ್ನು ಖರೀದಿಸಿದ್ದಾನೆಂದು ಹೇಳಿದ ಅಂಗಡಿಯವನನ್ನು ಸಹ ತನಿಖೆ ನಡೆಸಿದ್ದೇವೆ, , ಐನ್ ಕ್ರೀಮ್ ತಯಾರಿಸಲು ಆನ್ ಮೇರಿಗೆ ಕೇಳುವ ಒಂದು ದಿನ ಮೊದಲು ಆತ ಈ ಪಾಷಾಣ ಖರೀದಿಸಿದ್ದಾನೆ ಎನ್ನುವುದು ಬೆಳಕಿಗೆ ಬಂದಿತು"

ಬೆನ್ನಿ ನಾಲ್ಕು ಎಕರೆ ಭೂಮಿಯನ್ನು ಹೊಂದಿರುವ ಶ್ರಮಶೀಲ ರೈತ.ನಾಗಿದ್ದು ಆತನಲ್ಲಿ ಹಂದಿ ಸಾಕಣೆ, ಕೋಳಿ ಸಾಕಾಣಿಕೆ ಮತ್ತು ರಬ್ಬರ್ ಮರಗಳಿವೆ.ಕೊಟ್ಟಾಯಂನ ಕೈಗಾರಿಕಾ ತರಬೇತಿ ಸಂಸ್ಥೆಯಿಂದ (ಐಟಿಐ) ಅಲ್ಬಿನ್ ಆಟೋಮೊಬೈಲ್ ಮೆಕ್ಯಾನಿಕ್ ಕೋರ್ಸ್ ಅನ್ನು ಪೂರ್ಣಗೊಳಿಸಿದರೂ ಆತನಿಗೆ ಸೂಕ್ತ ಉದ್ಯೋಗ ಹುಡುಕಲಿಲ್ಲ. . "ಮನೆಯಲ್ಲಿ, ಅವನು ತನ್ನ ತಂದೆಗೆ ಸಹಾಯ ಮಾಡಲಿಲ್ಲ ಅಥವಾ ಬೇರೆ ಯಾವುದೇ ಕೆಲಸವನ್ನೂ ಮಾಡಲಿಲ್ಲ. ಅದು ಇಬ್ಬರ ನಡುವಿನ ಘರ್ಷಣೆಗೆ ಕಾರಣವಾಗಿದೆ" ಪೋಲೀಸರು ಹೇಳಿದ್ದಾರೆ.

ಅವನು ತನ್ನ ಸಹೋದರಿಯೊಂದಿಗೆ ಉತ್ತಮ ಸಂಬಂಧವನ್ನು ಸಹ ಹೊಂದಿರಲಿಲ್ಲ. ಅಲ್ಬಿನ್ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾನೆ. ಅವನಿಗೆ ಹಲವಾರು ಗೆಳತಿಯರು ಸಹ ಇದ್ದರು, ಅವರು ಫಾಸ್ಟ್ ಲೈಫ್ ಗಾಗಿ ಹಣ ಬೇಕೆಂದು ಆತನಲ್ಲಿ ಕೇಳುತ್ತಿದ್ದರು, ಮತ್ತು ಹಣ ಎರವಲು ಪಡೆಯುತ್ತಿದ್ದರು. ಅವನು ತಂದೆ ಹಾಗೂ ಕುಟುಂಬ ನನ್ನ ಶೋಕಿತನದ ಜೀವನಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿದ್ದಾನೆ, ಅದಕ್ಕಾಗಿ ಆತ ನ್ಯಾಯವಾಗಿ ದುಡಿಯಲು ಬಯಸಿಲ್ಲ.  ಆದರೆ ತ್ವರಿತವಾಗಿ ಶ್ರೀಮಂತನಾಗಲು ಕಳ್ಳ ಮಾರ್ಗ ಹಿಡಿದಿದ್ದ.

ಇನ್ನು ಆರೋಪಿಯು ಈ ಹೊಂದೊಮ್ಮೆ  ಚಿಕನ್ ಕರಿಯಲ್ಲಿ ರಾಟೋಲ್ ಪೇಸ್ಟ್ ಬೆರೆಸಿ ಮನೆಯವರಿಗೆ ತಿನ್ನಿಸಿದ್ದ ಆದರೆ ಅದು ಅಷ್ಟು ಪರಿಣಾಮ ಬೀರಿರಲಿಲ್ಲ.  ಆದ್ದರಿಂದ ಈ ಬಾರಿ ಅವನು ಗೂಗಲ್ ಸರ್ಚ್ ಮಾಡಿ ಐಸ್ ಕ್ರೀಂ ಮಾಡಿಸಿದ್ದಾನೆ, ಎಂದು ಪೋಲೀಸರು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com