ಕೋವಿಡ್ ವಾರಿಯರ್ಸ್ ಗೆ ಮೊದಲ ಲಸಿಕೆ- ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೆ

 ಕೊರೋನಾವೈರಸ್ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಶ್ರಮ ವಹಿಸುತ್ತಿದ್ದು,ಅವರ ಪ್ರಯತ್ನ ಒಂದು ವೇಳೆ ಫಲಪ್ರದವಾದರೆ ಮೊದಲ ಡೋಸ್ ನ್ನು ಕೋವಿಡ್-19 ವಾರಿಯರ್ಸ್ ಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಹಾಯಕ ಸಚಿವ ಅಶ್ವಿನ್ ಕುಮಾರ್ ಚೌಬೆ ಶನಿವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾವೈರಸ್ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಶ್ರಮ ವಹಿಸುತ್ತಿದ್ದು,ಅವರ ಪ್ರಯತ್ನ ಒಂದು ವೇಳೆ ಫಲಪ್ರದವಾದರೆ ಮೊದಲ ಡೋಸ್ ನ್ನು ಕೋವಿಡ್-19 ವಾರಿಯರ್ಸ್ ಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಹಾಯಕ ಸಚಿವ ಅಶ್ವಿನ್ ಕುಮಾರ್ ಚೌಬೆ ಶನಿವಾರ ಹೇಳಿದ್ದಾರೆ.

ಕೆಂಪು ಕೋಟೆ ಬಳಿಕ ನಡೆದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸುವತ್ತಾ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಕೋವಿಡ್-19 ವಿರುದ್ಧ ಮೂರು ಲಸಿಕೆಗಳು ಪರೀಕ್ಷೆಯ ವಿವಿಧ ಹಂತದಲ್ಲಿವೆ.ಇದರಲ್ಲಿ ನಾವು ಯಶಸ್ವಿಯಾದರೆ ನಮ್ಮ ಕೋವಿಡ್ ವಾರಿಯರ್ಸ್ ಗೆ ಮೊದಲ ಡೋಸ್ ನೀಡಲಾಗುವುದು
ಎಂದರು.

ಐಸಿಎಂಆರ್ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾ ಕಂಪನಿ ನಿರ್ಮಿತ ಲಸಿಕೆಗಳ ಮೇಲಿನ ಮಾನವ ಪ್ರಯೋಗದ ಮೊದಲ ಹಾಗೂ  ಎರಡನೇ ಹಂತ ಪ್ರಸ್ತುತ ಪ್ರಗತಿಯಲ್ಲಿದೆ. ಆಕ್ಸ್ ಫರ್ಡ್ ವಿವಿ ಅಭಿವೃದ್ಧಿಪಡಿಸಿರುವ ಮೂರನೇ ಲಸಿಕೆ ಮೇಲಿನ ಎರಡು ಹಾಗೂ ಮೂರನೇ ಹಂತದ ಮಾನವ ಪ್ರಯೋಗ ನಡೆಸಲು ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com