ಸ್ವಾತಂತ್ರ್ಯೋತ್ಸವದಂದು ಸ್ವದೇಶಿ ನಿರ್ಮಿತ ಆ್ಯಂಟಿ-ಡ್ರೋನ್ ಸಿಸ್ಟಮ್ ಶಕ್ತಿ ಪ್ರದರ್ಶನ!

74ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. 

ಪ್ರಧಾನಿ ಮೋದಿ ಧ್ವಜಾರೋಹಣ ಸಮಾರಂಭ ನಡೆದ ಕೆಂಪು ಕೋಟೆಯ ಬಳಿ ಡ್ರೋನ್ ಗಳ ಮೇಲೆ ಕಣ್ಣೀಡಲು ಹಾಗೂ ಡ್ರೋನ್ ನಿಷ್ಕ್ರೀಯಗೊಳಿಸುವ ಸಾಧನವನ್ನು ಡಿಆರ್ ಡಿಒ ಪರಿಚಯಿಸಿದೆ. ಈ ಆ್ಯಂಟಿ ಡ್ರೋನ್ ಸಿಸ್ಟನ್ 3 ಕಿ.ಮೀ ಒಳಗೆ ಯಾವುದೇ ಮೈಕ್ರೋ ಡ್ರೋನ್ ಇದ್ದರೂ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ. 

ಇನ್ನು ಒಂದೆರೆಡೂ ಕಿ.ಮೀ ಒಳಗೆ ಯಾವುದೇ ರೀತಿಯ ಡ್ರೋನ್ ಇದ್ದರೂ ಅದನ್ನು ಲೇಸರ್ ಸಾಮರ್ಥ್ಯದ ಮೂಲಕ ಹೊಡೆದುರುಳಿಸುತ್ತದೆ. 

ಧ್ವಜರೋಹಣ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ ಅವರು ದೇಶದ ಸಾರ್ವಭೌಮತ್ವ, ಸ್ವಾಯತ್ತತೆಗೆ ಧಕ್ಕೆಯನ್ನುಂಟುಮಾಡಲು ಯತ್ನಿಸುವವರಿಗೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆಯಿಂದ ಹಿಡಿದು ಗಡಿ ವಾಸ್ತವ ರೇಖೆಯವರೆಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಗಡಿ ವಾಸ್ತವ ರೇಖೆ(ಎಲ್ ಒಸಿ)ಯಿಂದ ಹಿಡಿದು ಗಡಿ ನಿಯಂತ್ರಣ ರೇಖೆ(ಎಲ್ ಎಸಿ)ಯವರೆಗೆ ಭಾರತಕ್ಕೆ ಸವಾಲುಗಳು ಎದುರಾದ ಸಮಯಗಳಲ್ಲಿ ನಮ್ಮ ಸೈನಿಕರು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಬಲವಾದ ಸಂದೇಶ ನೀಡಿದ್ದಾರೆ.

ಕಳೆದ ಜೂನ್ ನಲ್ಲಿ ಪೂರ್ವ ಲಡಾಕ್ ನಲ್ಲಿ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ಪ್ರಸ್ತಾಪಿಸಿದ ಮೋದಿ, ನಮ್ಮ ದೇಶ, ನಮ್ಮ ಜವಾನರು ಏನು ಮಾಡಬಹುದು ಎಂಬುದನ್ನು ಇಡೀ ವಿಶ್ವ ಲಡಾಕ್ ನಲ್ಲಿ ನೋಡಿದೆ. ಇಂದು ಆ ಎಲ್ಲಾ ಧೈರ್ಯಶಾಲಿ, ಶಕ್ತಿಶಾಲಿ ಯೋಧರಿಗೆ ಕೆಂಪು ಕೋಟೆಯಲ್ಲಿ ನಿಂತು ಕೈ ಮುಗಿಯುತ್ತೇನೆ, ಭಯೋತ್ಪಾದನೆ ಅಥವಾ ವಿಸ್ತರಣೆ ಯಾವ ವಿಷಯಗಳು ಬಂದರೂ ಕೂಡ ಭಾರತ ಅವುಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com