ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿಯಾಗಿ ಅಜಯ್ ಮಾಕೆನ್ ನೇಮಕ

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ವಿಶ್ವಾಸ ಮತ ಗೆದ್ದ ಎರಡು ದಿನಗಳ ಬಳಿಕ  ಸಚಿನ್ ಪೈಲಟ್ ಬೇಡಿಕೆಯಂತೆ ಕಾಂಗ್ರೆಸ್ ಉಸ್ತುವಾರಿಯಿಂದ ಅವಿನಾಶ್ ಪಾಂಡೆ ಅವರನ್ನು ಹೈಕಮಾಂಡ್ ಬದಲಾಯಿಸಿದ್ದು, ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ಅವರನ್ನು ನೂತನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಅಜಯ್ ಮಾಕೆನ್
ಅಜಯ್ ಮಾಕೆನ್

ನವದೆಹಲಿ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ವಿಶ್ವಾಸ ಮತ ಗೆದ್ದ ಎರಡು ದಿನಗಳ ಬಳಿಕ  ಸಚಿನ್ ಪೈಲಟ್ ಬೇಡಿಕೆಯಂತೆ ಕಾಂಗ್ರೆಸ್ ಉಸ್ತುವಾರಿಯಿಂದ ಅವಿನಾಶ್ ಪಾಂಡೆ ಅವರನ್ನು ಹೈಕಮಾಂಡ್ ಬದಲಾಯಿಸಿದ್ದು, ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ಅವರನ್ನು ನೂತನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಐದು ವರ್ಷಗಳ ಗ್ಯಾಪ್ ನಂತರ ಅಜಯ್ ಮಾಕೆನ್ ಎಐಸಿಸಿಗೆ ಮರಳಿದ್ದಾರೆ.ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾದ ನಂತರ ಅವಿನಾಶ್ ಪಾಂಡೆ ಅವರನ್ನು ಉಸ್ತುವಾರಿ ಸ್ಥಾನದಿಂದ ವಜಾಗೊಳಿಸಲು ಪಟ್ಟು ಹಿಡಿದಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಣ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯ ನಾಯಕ ಅಹ್ಮದ್ ಪಟೇಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಅಜಯ್ ಮಾಕೆನ್ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ್ದಾರೆ.ಈ ಸಮಿತಿ ಪೈಲಟ್ ಬಣದ ದೂರುಗಳನ್ನು ಬಗೆಹರಿಸಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com