ಕೊವಿಡ್ ಹೆಚ್ಚಳ ಹಿನ್ನೆಲೆ: ಬಿಹಾರದಲ್ಲಿ ಸೆಪ್ಟೆಂಬರ್ 6 ರವರೆಗೆ ಲಾಕ್‌ಡೌನ್ ವಿಸ್ತರಣೆ

ಕೊರೋನಾವೈರಸ್  ಪ್ರಕರಣಗಳು ಮತ್ತು ಅದರಿಂದಾಗುವ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಮಧ್ಯೆ ಬಿಹಾರ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಲಾಕ್‌ಡೌನ್ ಅನ್ನು ಸೆಪ್ಟೆಂಬರ್ 6 ರವರೆಗೆ ವಿಸ್ತರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೊವಿಡ್ ಹೆಚ್ಚಳ ಹಿನ್ನೆಲೆ: ಬಿಹಾರದಲ್ಲಿ ಸೆಪ್ಟೆಂಬರ್ 6 ರವರೆಗೆ ಲಾಕ್‌ಡೌನ್ ವಿಸ್ತರಣೆ

ಪಾಟ್ನಾ: ಕೊರೋನಾವೈರಸ್  ಪ್ರಕರಣಗಳು ಮತ್ತು ಅದರಿಂದಾಗುವ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಮಧ್ಯೆ ಬಿಹಾರ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಲಾಕ್‌ಡೌನ್ ಅನ್ನು ಸೆಪ್ಟೆಂಬರ್ 6 ರವರೆಗೆ ವಿಸ್ತರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೇಂದ್ರದ ಅನ್ ಲಾಕ್ 3.0 ಮಾರ್ಗಸೂಚಿಗಳ ಅಡಿಯಲ್ಲಿ, ವೈರಸ್ ಹರಡುವುದನ್ನು ತಡೆಗಟ್ಟಲು ಕಂಟೈನ್‌ಮೆಂಟ್ ವಲಯಗಳು ಮತ್ತು ಅಗತ್ಯವೆಂದು ಪರಿಗಣಿಸಲಾದ ಇತರ ಪ್ರದೇಶಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

"ಬಿಹಾರ ರಾಜ್ಯದಲ್ಲಿ ಕೋವಿಡ್ -19 ರ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇಲಿನ ಸೂಚನೆಗಳಂತೆ ಎಂಎಚ್ ಎ ಯಿಂದ ನೀಡಲ್ಪಟ್ಟಆದೇಶದ ಅಡಿಯಲ್ಲಿ , ಈ ಇಲಾಖೆಯು ಹೊರಡಿಸಿರುವ ನಿರ್ಬಂಧಗಳು ವೈಡ್ ಮೆಮೋ ಸಂಖ್ಯೆ  102/f4.F.31t ದಿನಾಂಕ 30.7.2020 ರಂತೆ ದಿನಾಂಕ 06.09.2020 ರವರೆಗೆ  ಹೆಚ್ಚಿನ ನಿರ್ಬಂಧಗಳನ್ನು ಹೇರುವಿಕೆ ಮುಂದುವರಿಸಲಾಗುತ್ತದೆ. "ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಈ ಮೊದಲು ರಾಜ್ಯದಲ್ಲಿ ಅನುಮತಿಸಲಾಗಿದ್ದ ಎಲ್ಲಾ ಅಗತ್ಯ ಮತ್ತು ಇತರ ಸೇವೆಗಳನ್ನು ಹೊಸ ವಿಸ್ತೃತ ಲಾಕ್‌ಡೌನ್ ಅಡಿಯಲ್ಲಿ ಸಹ ಅನುಮತಿಸಲಾಗುತ್ತದೆ. ಲಾಕ್ ಡೌನ್ ಸಮಯದಲ್ಲಿ ಅನುಸರಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ಸರ್ಕಾರ ಈ ಹಿಂದೆ ಬಿಡುಗಡೆ ಮಾಡಿತ್ತು.

ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಅವಕಾಶವಿದೆ. ಅಗತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶವಿದೆ. ಇಂಟರ್ನೆಟ್ ಸೇವಾ ಪೂರೈಕೆದಾರರು, ಬ್ರಾಡ್‌ಬ್ಯಾಂಡ್ ಮತ್ತು ಕೇಬಲ್ ಸೇವೆಗಳು ಸಹ ಕಾರ್ಯನಿರ್ವಹಿಸಬಹುದು. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಸೇವೆಗಳಿಗೆ ಅನುಮತಿ ನೀಡಲಾಗುವುದು. 

ರೆಸ್ಟೋರೆಂಟ್‌ಗ ಹೋಂ ಡೆಲಿವರಿಯನ್ನು ಅನುಮತಿಸಲಾಗುತ್ತದೆ, ಹೋಟೆಲ್‌ಗಳು, ಲಾಡ್ಜ್ ಗಳನ್ನು ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.ಟ್ಯಾಕ್ಸಿಗಳು ಮತ್ತು ಆಟೋಗಳು ರಸ್ತೆಗಳಲ್ಲಿ ಸಂಚರಿಸುತ್ತವೆ.  ಖಾಸಗಿ ವಾಹನಗಳನ್ನು ಸೀಮಿತ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗಿದೆ. ಕಚೇರಿಗೆ ಹೋಗುವಾಗ ಕಚೇರಿಗೆ ಹೋಗುವವರು ತಮ್ಮ ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕು. ಅಗತ್ಯ ಸೇವಾ ಪೂರೈಕೆದಾರರಿಗೆ ಮನೆಯಿಂದ ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಮಾತ್ರ ಅನುಮತಿ ಇದೆ

ಏತನ್ಮಧ್ಯೆ, ಬಿಹಾರದ ಕೋವಿಡ್ -19 ಪ್ರಕರಣಗಳ ಸಂಖ್ಯೆ  ಭಾನುವಾರ 1.04 ಲಕ್ಷಕ್ಕೆ ಏರಿತು. ಒಂದೇ ದಿನ  2,187 ಜನರು ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ  22 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣ  537 ಕ್ಕೆ  ಏರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com