15 ದಿನಗಳಲ್ಲಿ 'ಡಾಲ್ಫಿನ್‌ ಯೋಜನೆ' ಆರಂಭ; ಜಾವಡೇಕರ್‌

ಡಾಲ್ಫಿನ್ ಗಳ ಸಂರಕ್ಷಣೆಗಾಗಿ ಮುಂದಿನ 15 ದಿನಗಳೊಳಗೆ 'ಡಾಲ್ಫಿನ್ ಯೋಜನೆ' ಆರಂಭಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಹೇಳಿದ್ದಾರೆ.
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ನವದೆಹಲಿ: ಡಾಲ್ಫಿನ್ ಗಳ ಸಂರಕ್ಷಣೆಗಾಗಿ ಮುಂದಿನ 15 ದಿನಗಳೊಳಗೆ 'ಡಾಲ್ಫಿನ್ ಯೋಜನೆ' ಆರಂಭಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಹೇಳಿದ್ದಾರೆ.

ಸ್ವಾತಂತ್ರ್ಯೋತ್ಸವದ ದಿನದಂದು ಪ್ರಧಾನಿ ನರೇಂದ್ರ ಡಾಲ್ಫಿನ್ ಯೋಜನೆಯ ಕುರಿತು ಪ್ರಕಟಿಸಿದ್ದರು. ಈ ಯೋಜನೆಯಡಿ ನದಿಗಳು ಮತ್ತು ಸಾಗರದಲ್ಲಿ ಜೀವಿಸುವ ಡಾಲ್ಫಿನ್ ಗಳನ್ನು ಸಂರಕ್ಷಿಸುವ ಮೂಲಕ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಡಾಲ್ಫಿನ್ ಗಳು ಪತ್ತೆಯಾದಲ್ಲಿ, ಮೀನುಗಾರರು ಮತ್ತು ಸ್ಥಳೀಯ ಜನ ನೆರವಿನಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.

ಈ ಸಂಬಂಧ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಸಭೆ ನಡೆಸಿದ ಜಾವಡೇಕರ್ ನಮ್ಮ ನದಿಗಳಲ್ಲಿ 3 ಸಾವಿರ ಡಾಲ್ಫಿನ್ ಗಳಿವೆ. 12 ರಾಜ್ಯಗಳ ಸಾಗರಗಳಲ್ಲಿ ಕೂಡ ಡಾಲ್ಫಿನ್ ಗಳು ಕಂಡುಬಂದಿವೆ. 15 ದಿನಗಳಲ್ಲಿ ಈ ಯೋಜನೆಯ ವಿನ್ಯಾಸಗೊಳಿಸಲು ಆರಂಭಿಸಲಾಗುವುದು ಎಂದರು. 
ಗುಜರಾತ್ ನಲ್ಲಿ ಆರಂಭಗೊಂಡಿರುವ ಸಿಂಹಗಳ ಸಂರಕ್ಷಣೆಯ 'ಸಿಂಹ ಯೋಜನೆ'ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದರು. ಈ ಯೋಜನೆಯನ್ನು ಕೂಡ ಮೋದಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com