ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ವರ್ಗಾವಣೆ:ಮೇಘಾಲಯ ಗವರ್ನರ್ ಆಗಿ ನೇಮಕ

ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ವರ್ಗಾವಣೆ ಮಾಡಿ ಮೇಘಾಲಯ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ರಾಜ್ಯಪಾಲ ಸತ್ಯಪಾಲ್ ಮಲಿಕ್
ರಾಜ್ಯಪಾಲ ಸತ್ಯಪಾಲ್ ಮಲಿಕ್

ಪಣಜಿ: ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ವರ್ಗಾವಣೆ ಮಾಡಿ ಮೇಘಾಲಯ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಗೋವಾಕ್ಕೆ ರಾಜ್ಯಪಾಲರನ್ನು ನೇಮಿಸುವವರೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಗೋವಾ ರಾಜ್ಯಪಾಲರಾಗಿ ಹೆಚ್ಚುವರಿ ಕರ್ತವ್ಯ ವಹಿಸಿಕೊಳ್ಳಲಿದ್ದಾರೆ ಎಂದು ರಾಷ್ಟ್ರಪತಿ ಭವನ ವಕ್ತಾರರು ತಿಳಿಸಿದ್ದಾರೆ.

ಮೇಘಾಲಯ ರಾಜ್ಯಪಾಲರಾಗಿದ್ದ ತತಾಗತ ರಾಯ್ 5 ವರ್ಷಗಳ ತಮ್ಮ ಅವಧಿ ಪೂರ್ಣಗೊಳಿಸಿದ್ದರು. ಮೂರು ವರ್ಷಗಳ ಕಾಲ ತ್ರಿಪುರಾ ಮತ್ತು ಉಳಿದ ವರ್ಷಗಳನ್ನು ಮೇಘಾಲಯ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಸತ್ಯಪಾಲ್ ಮಲಿಕ್ ಅವರು ಆಗಸ್ಟ್ 2018ರಿಂದ ಅಕ್ಟೋಬರ್ 2019ರವರೆಗೆ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದರು. ಕಳೆದ ಅಕ್ಟೋಬರ್ ನಲ್ಲಿ ಗೋವಾ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಇವರ ಅವಧಿಯಲ್ಲಿಯೇ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ಪುನರ್ ಸಂಘಟನೆ ಮಸೂದೆಯನ್ನು ಅನುಮೋದನೆ ಮಾಡಿತ್ತು. ಇದರಿಂದ ಜಮ್ಮು-ಕಾಶ್ಮೀರ ವಿಭಜನೆಯಾಗಿ ಜಮ್ಮ-ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶವಾಯಿತು.

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ ಸರ್ಕಾರ ಮುರಿದು ಬಿದ್ದ ನಂತರ ಸರ್ಕಾರ ರಚನೆಗೆ ಬೇರೆ ರಾಜಕೀಯ ಪಕ್ಷಗಳು ಬಹುಮತ ಸಾಬೀತಿಗೆ ಸದನ ಕರೆಯಲು ಒತ್ತಾಯಿಸಿ ಪತ್ರ ಬರೆದಿದ್ದಾಗ ತಮಗೆ ಪತ್ರ ಸಿಕ್ಕಿರಲಿಲ್ಲ ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದರು. ರಾಜ ಭವನದಲ್ಲಿ ಫ್ಯಾಕ್ಸ್ ಮೆಷಿನ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದರು.

ಗೋವಾ ರಾಜ್ಯಪಾಲರಾದ ನಂತರ ಹೊಸ ರಾಜ ಭವನ ಸ್ಥಾಪನೆಗೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದಾಗ ರಾಜ್ಯದ ಹಣಕಾಸು ಸ್ಥಿತಿಗತಿ ಉತ್ತಮವಾಗುವವರೆಗೆ ನಿರ್ಮಾಣ ಬೇಡ ಎಂದು ತಳ್ಳಿಹಾಕಿ ಕೂಡ ಸುದ್ದಿಯಾಗಿದ್ದರು. ಗವರ್ನರ್ ಸತ್ಯಪಾಲ್ ಮಲಿಕ್ 2005ರಲ್ಲಿ ಬಿಜೆಪಿ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com