ಮೇಘಾಲಯ: 17 ಬಿಎಸ್ಎಫ್ ಸಿಬ್ಬಂದಿ ಸೇರಿದಂತೆ 49 ಹೊಸ ಕೋವಿಡ್ ಪ್ರಕರಣ ದೃಢ

ಮೇಘಾಲಯದಲ್ಲಿ 17 ಗಡಿ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಇನ್ನೂ ನಲವತ್ತೊಂಬತ್ತು ಜನರು ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದಾರೆ. ಇದರೊಡನೆ ಬುಧವಾರದವರೆಗೆ  ಈಶಾನ್ಯ ರಾಜ್ಯ ಮೇಘಾಲಯದಲ್ಲಿ  1,506  ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. 
ಬಿಎಸ್ಎಫ್ ಸಿಬ್ಬಂದಿ

 ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನಲವತ್ತೇಳು ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಉತ್ತರ ಗ್ಯಾರೋ ಹಿಲ್ಸ್ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಮನ್ ವಾರ್ ತಿಳಿಸಿದ್ದಾರೆ.

"ಹೊಸ ಸೋಂಕಿತರ ಪೈಕಿ  ಹದಿನೇಳು ಬಿಎಸ್ಎಫ್ ಸಿಬ್ಬಂದಿ ಸೇರಿದ್ದಾರೆ" ಎಂದು ಅವರು ಹೇಳಿದರು. ಇನ್ನೂ 9 ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಮತ್ತು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಮೇಘಾಲಯದಲ್ಲಿ ಇದುವರೆಗೆ  694  ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಆರು ರೋಗಿಗಳು ಸಾವನ್ನಪ್ಪಿದ್ದಾರೆ. ಸಧ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 806 ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com