ಸಂಚು ವಿಫಲಗೊಳಿಸಿದ ಎಟಿಎಸ್: ಬಿಜೆಪಿ ಮುಖಂಡನ ಹತ್ಯೆಗೆ ಛೋಟಾ ಶಕೀಲ್ ಸಂಚು, ಶಾರ್ಪ್ ಶೂಟರ್ ಬಂಧನ

ಬಿಜೆಪಿ ಮುಖಂಡರೊಬ್ಬರ ಹತ್ಯೆಗೆ ಛೋಟಾ ಶಕೀಲ್ ಸಂಚು ರೂಪಿಸಿದ್ದು ಈ ಸಂಬಂಧ ಶಾರ್ಪ್ ಶೂಟರ್ ಓರ್ವನನ್ನು ಗುಜರಾತ್ ಉಗ್ರ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ. 
ಎಟಿಎಸ್ ಅಧಿಕಾರಿಗಳು
ಎಟಿಎಸ್ ಅಧಿಕಾರಿಗಳು

ಅಹಮದಾಬಾದ್: ಬಿಜೆಪಿ ಮುಖಂಡರೊಬ್ಬರ ಹತ್ಯೆಗೆ ಛೋಟಾ ಶಕೀಲ್ ಸಂಚು ರೂಪಿಸಿದ್ದು ಈ ಸಂಬಂಧ ಶಾರ್ಪ್ ಶೂಟರ್ ಓರ್ವನನ್ನು ಗುಜರಾತ್ ಉಗ್ರ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ. 

ಛೋಟಾ ಶಕೀಲ್ 24 ವರ್ಷದ ಇಫ್ರಾನ್ ಅಲಿಯಾಸ್ ಕಾಲಿಯಾ ಶೇಖ್ ಎಂಬಾತನಿಗೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಮುಖಂಡ ಗೋರ್ಧನ್ ಜಡಾಫಿಯಾ ಹತ್ಯೆಗೆ ಸುಪಾರಿ ನೀಡಿದ್ದು ಇಫ್ರಾನ್ ಮುಂಬೈನಿಂದ ಅಹಮದಬಾದ್ ಗೆ ಬಂದಿದ್ದಾಗ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. 

ಲಾಲ್ ದರ್ವಾಜಾ ಪ್ರದೇಶದಲ್ಲಿರುವ ಹೋಟೆಲ್ ವೀನಸ್ ನಲ್ಲಿ ಇಫ್ರಾನ್ ತಂಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಎಟಿಎಸ್ ಅಧಿಕಾರಿಗಳು ಬಂಧಿಸಲು ಮುಂದಾದಾಗ ಇಫ್ರಾನ್ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇಫ್ರಾನ್ ಬಳಿಯಿದ್ದ ಎರಡು ಪಿಸ್ತೂಲ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನು ವಿಚಾರಣೆ ವೇಳೆ ಛೋಟಾ ಶಕೀಲ್ ಸುಪಾರಿ ನೀಡಿದ್ದಾಗಿ ಹೇಳಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com