ಅಸಹ್ಯಕರ ಘಟನೆ: ತಂದೆಯ ಲ್ಯಾಪ್ ಟಾಪ್ ನಲ್ಲಿ ತನ್ನದೆ ಬೆತ್ತಲೆ ಚಿತ್ರಗಳನ್ನು ಕಂಡು ದಂಗಾದ ಪುತ್ರಿ!

ತಂದೆ ಮಗಳ ಭಾಂದವ್ಯಕ್ಕೆ ಬೆಲೆ ಕಟ್ಟಲಾಗದೂ ಅಂತಹದರಲ್ಲಿ ತನ್ನದೆ ಬೆತ್ತಲೆ ಚಿತ್ರಗಳನ್ನು ತಂದೆಯ ಲ್ಯಾಪ್ ಟಾಪ್ ನಲ್ಲಿ ನೋಡಿದ ಮಗಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. 

Published: 20th August 2020 12:46 PM  |   Last Updated: 20th August 2020 12:47 PM   |  A+A-


for representation purpose only

ಸಂಗ್ರಹ ಚಿತ್ರ

Posted By : vishwanath
Source : Online Desk

ಹೈದರಾಬಾದ್: ತಂದೆ ಮಗಳ ಭಾಂದವ್ಯಕ್ಕೆ ಬೆಲೆ ಕಟ್ಟಲಾಗದೂ ಅಂತಹದರಲ್ಲಿ ತನ್ನದೆ ಬೆತ್ತಲೆ ಚಿತ್ರಗಳನ್ನು ತಂದೆಯ ಲ್ಯಾಪ್ ಟಾಪ್ ನಲ್ಲಿ ನೋಡಿದ ಮಗಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. 

ಹೌದು, ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದೆ. 40 ವರ್ಷದ ರಾಜೇಶ್ ಎಂಬಾತ ತನ್ನ 20 ವರ್ಷದ ಮಲಮಗಳ ಬೆತ್ತಲೆ ಚಿತ್ರಗಳನ್ನು ಸೆರೆ ಹಿಡಿದು ತನ್ನ ಲ್ಯಾಪ್ ಟಾಪ್ ನಲ್ಲಿ ಶೇಖರಿಸಿಟ್ಟಿದ್ದ. 

ತನ್ನ ತಂದೆಯ ಲ್ಯಾಪ್ ಟಾಪ್ ಬಳಸುವಾಗ ಸಿಕ್ರೇಟ್ ಫೋಲ್ಡರ್ ನಲ್ಲಿ ತನ್ನ ಬೆತ್ತಲೆ ಚಿತ್ರಗಳನ್ನು ಸೇವ್ ಮಾಡಿರುವುದನ್ನು ಸಂತ್ರಸ್ತೆ ನೋಡಿದ್ದಾಳೆ. ಇದರಿಂದ ಆಘಾತಗೊಂಡ ಆಕೆ ತಾಯಿಯ ಜೊತೆ ಸೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 

ರಾಜೇಶ್ ಹೈದರಾಬಾದ್ ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದು ಪ್ರಕರಣ ಸಂಬಂಧ ಆತನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆತನಿಗೆ ಕೋವಿಡ್ ಪಾಸಿಟಿವ್ ಇದ್ದ ಕಾರಣ ಚೇತರಿಸಿಕೊಂಡ ನಂತರ ಆತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಸಂತ್ರಸ್ತ ಯುವತಿ ಕಾನೂನು ವಿದ್ಯಾರ್ಥಿನಿಯಾಗಿದ್ದು ತಾನು 14 ಅಥವಾ 15 ವರ್ಷ ವಯಸ್ಸಾಗಿದ್ದಾಗ ಈ ಬೆತ್ತಲೆ ಫೋಟೋಗಳನ್ನು ತೆಗೆಯಲಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp