ಸಕಲ ಸರ್ಕಾರಿ ಗೌರವದೊಡನೆ ಸಂಗೀತ ಮಾಂತ್ರಿಕ ಜಸ್ ರಾಜ್ ಅಂತ್ಯಕ್ರಿಯೆ

ಭಾರತೀಯ ಶಾಸ್ತ್ರೀಯ  ಸಂಗೀತದ ಮೇರು ಗಾಯಕ ಪಂಡಿತ್ ಜಸ್ ರಾಜ್  ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮುಂಬೈನಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಡನೆ ನೆರವೇರಿತು. 
ಸಕಲ ಸರ್ಕಾರಿ ಗೌರವದೊಡನೆ ಸಂಗೀತ ಮಾಂತ್ರಿಕ ಜಸ್ ರಾಜ್ ಅಂತ್ಯಕ್ರಿಯೆ

ಮುಂಬೈ: ಭಾರತೀಯ ಶಾಸ್ತ್ರೀಯ  ಸಂಗೀತದ ಮೇರು ಗಾಯಕ ಪಂಡಿತ್ ಜಸ್ ರಾಜ್  ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮುಂಬೈನಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಡನೆ ನೆರವೇರಿತು. 

ಅಮೆರಿಕದ ನ್ಯೂಜೆರ್ಸಿಯ ತಮ್ಮ ಮನೆಯಲ್ಲಿ ಜಸ್ ರಾಜ್ ಹೃದಯ ಸ್ತಂಭನದಿಂದ ಸೋಮವಾರ ನಿಧನರಾಗಿದ್ದರು. 

ಕೊರೋನಾವೈರಸ್ ಪ್ರೇರಿತ ಲಾಕ್ ಡೌನ್ ಘೋಷಣೆಯಾದಾಗ ಅವರು ಯುಎಸ್ ನಲ್ಲಿದ್ದರು, ಪಂಡಿತ್ ಜಸ್ ರಾಜ್  ಅವರ ಪುತ್ರ ಶರಂಗ್ ದೇವ್ ಪಂಡಿತ್ ಅವರು ಅಂತಿಮ ವಿಧಿಗಳನ್ನು ನೆರವೇರಿಸಿದರು, ನಂತರ ವಿಲೇ ಪಾರ್ಲೆ ಅವರ ಪವನ್ ಹ್ಯಾನ್ಸ್ ಶವಾಗಾರದಲ್ಲಿ 21-ಗನ್ ಸೆಲ್ಯೂಟ್ ಮಾಡಿ ಗೌರವ ಸೂಚಿಸಲಾಯಿತು. ಲಾಕ್ ಡೌನ್ ಕಾರಣದಿಂದಾಗಿ ಶವಸಂಸ್ಕಾರದಲ್ಲಿ ಕೇವಲ 25-30 ಜನರಿಗೆ ಮಾತ್ರಭಾಗವಹಿಸಲು ಅವಕಾಶ ನೀಡಲಾಯಿತು.

ಅಂತ್ಯಕ್ರಿಯೆಯಲ್ಲಿ ಕುಟುಂಬದ ಮಾಧ್ಯಮ ಸಂಯೋಜಕ ಪ್ರೀತಮ್ ಶರ್ಮಾ, ಮೊಮ್ಮಗಳು ಶ್ವೇತಾ ಪಂಡಿತ್, ಸಂಗೀತ  ಸಂಯೋಜಕ ಜತಿನ್ ಪಂಡಿತ್, ಗಾಯಕ ಅನುಪ್ ಜಲೋಟಾ, ಕೈಲಾಶ್ ಖೇರ್ ಮತ್ತಿತರರು ಭಾಗವಹಿಸಿದ್ದರು. 

ಇದಕ್ಕೆ ಮುನ್ನ ಬುಧವಾರ ರಾಷ್ಟ್ರಧ್ವಜದಲ್ಲಿ ಸುತ್ತಿದ್ದ ಪಂಡಿತ್ ಜಸ್ ರಾಜ್ ಅವರ ಪಾರ್ಥಿವ ಶರೀರವನ್ನು  'ದರ್ಶನ'ಕ್ಕಾಗಿ ಅವರ ವರ್ಸೋವಾ ನಿವಾಸದಲ್ಲಿ ಇಡಲಾಗಿತ್ತು.ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ, ಗಾಯಕಿ ಶ್ರೇಯಾ ಘೋಶಾಲ್, ಪಂಡಿತ್ ರೋನು ಮಜುಂದಾರ್ ಮತ್ತು ಸಂಗೀತ ಮತ್ತು ಚಲನಚಿತ್ರೋದ್ಯಮದ ಇತರರು ಸಂಗೀತ ಲೋಕದ ಸ್ವರ ಸಾಮ್ರಾಟನಿಗೆ  ಅಂತಿಮ ನಮನ ಸಲ್ಲಿಸಿದರು.

ಪಂಡಿತ್ ಜಸ್ ರಾಜ್ ಅವರ ಪತ್ನಿ ಮಧುರಾ, ಮಗ ಶಾರಂಗ್ ಮತ್ತು ಮಗಳು ದುರ್ಗಾ ಜಸ್ ರಾಜ್ ಇಬ್ಬರೂ ಉತ್ತಮ ಸಂಗೀತಗಾರರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com