ಮಹಾರಾಷ್ಟ್ರ: ಕೊರೋನಾಗೆ ಸೆಡ್ಡು ಹೊಡೆದು ಸೋಂಕಿನಿಂದ ಗುಣಮುಖರಾದ 107 ವರ್ಷದ ಅಜ್ಜಿ!

107 ವರ್ಷದ ಅಜ್ಜಿ ಮತ್ತು ಅವರ 78 ವರ್ಷದ ವೃದ್ಧ ಮಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.  ಎಲ್ಲಾ ಅಡೆ ತಡೆಗಳನ್ನು ದಾಟಿ ಕೊರೋನಾ ಗೆದ್ದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಲ್ನಾ: 107 ವರ್ಷದ ಅಜ್ಜಿ ಮತ್ತು ಅವರ 78 ವರ್ಷದ ವೃದ್ಧ ಮಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಎಲ್ಲಾ ಅಡೆ ತಡೆಗಳನ್ನು ದಾಟಿ ಕೊರೋನಾ ಗೆದ್ದಿದ್ದಾರೆ. ಇಬ್ಬರು ಮಹಿಳೆಯರು ಮತ್ತು ಮೂರು ಕುಟುಂಬದ ಸದಸ್ಯರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶತಾಯುಷಿ ಅಜ್ಜಿ, ಆಕೆಯ ಮಗಳು, 65 ವರ್ಷದ ಮಗ ಮತ್ತು ಇಬ್ಬರು ಮೊಮ್ಮಕ್ಕಳು, ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಮಾಡಲಾಗಿದೆ. ಆಗಸ್ಟ್ 11 ರಂದು ಜಲ್ನಾದ ಮಾಲಿಪುರ ನಿವಾಸಿಗಳಾದ ಈ ಕುಟುಂಬಸ್ಥರು ಕೊರೋನಾ ಪಾಸಿಟಿವ್ ನಿಂದಾಗಿ ಆಸ್ಪತ್ರೆಗೆ
ದಾಖಲಾಗಿದ್ದರು.

ಶತಾಯುಷಿ ಅಜ್ಜಿಯೂ ಇತ್ತೀಚೆಗೆ ಸ್ಪೈನಲ್ ಕಾರ್ಡ್ ಚಿಕಿತ್ಸೆಗೊಳಗಾಗಿದ್ದರು, ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು.  ಅವರಿಗೆ ಹೆಚ್ಚಿನ ವಯಸ್ಸಾಗಿದ್ದ ಕಾರಣ ಕೊರೋನಾ ಗೆಲ್ಲುವುದು ಕಷ್ಟಕರವಾಗಿತ್ತು ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com