ಆಂಧ್ರ ಪ್ರದೇಶ: ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ; ಪ್ರಜ್ಞಾ ಹೀನರಾದ 20 ಕಾರ್ಮಿಕರು

ಆಂಧ್ರಪ್ರದೇಶದ ಚಿತ್ತೋರ್‌ನ ಖಾಸಗಿ ಹಾಲು ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಂ ಗ್ಯಾಸ್‌ ಸೋರಿಕೆಯಿಂದ 20 ಮಂದಿ ಕಾರ್ಮಿಕರು ಅಸ್ಚಸ್ಥರಾಗಿದ್ದಾರೆ.
ಅಸ್ವಸ್ಥಗೊಂಡ ಕಾರ್ಮಿಕರು
ಅಸ್ವಸ್ಥಗೊಂಡ ಕಾರ್ಮಿಕರು

ಅಮರಾವತಿ: ಆಂಧ್ರಪ್ರದೇಶದ ಚಿತ್ತೋರ್‌ನ ಖಾಸಗಿ  ಕೃಷಿ ಉತ್ಪನ್ನ ಘಟಕದಲ್ಲಿ ಅಮೋನಿಯಂ ಗ್ಯಾಸ್‌ ಸೋರಿಕೆಯಿಂದ 20 ಮಂದಿ ಕಾರ್ಮಿಕರು ಅಸ್ಚಸ್ಥರಾಗಿದ್ದಾರೆ.

ಫ್ಯಾಕ್ಟರಿಯಲ್ಲಿದ್ದ ಸಿಲಿಂಡರ್‌ನಲ್ಲಿ ಅಮೋನಿಯಂ ಗ್ಯಾಸ್‌ ತುಂಬಿಡಲಾಗಿತ್ತು, ಏಕಾಏಕಿ ಸೋರಿಕೆಯಿಂದಾಗಿ ಗುರುವಾರ ರಾತ್ರಿ ಈ ಅವಘಡ ಸಂಭವಿಸಿದೆ. ರಾತ್ರಿ ಹೊತ್ತು ಇಪ್ಪತ್ತಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದರು ಗ್ಯಾಸ್‌ ಸೋರಿಕೆಯಿಂದಾಗಿ ಕೆಲ ಕಾರ್ಮಿಕರು ಸ್ಥಳದಲ್ಲೇ ಕುಸಿದು ಬಿದ್ದರೆ ಇನ್ನು ಕೆಲವರು ಉಸಿರುಗಟ್ಟುವ ಸಮಸ್ಯೆ ಹಾಗೂ ವಾಂತಿ ಮಾಡಿಕೊಂಡಿದ್ದಾರೆ.

ಅಸ್ವಸ್ಥಗೊಂಡ 14 ಮಂದಿ ಕಾರ್ಮಿಕರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇನ್ನು ಈ ಪೈಕಿ ಗಂಭೀರ ಉಸಿರಾಟದ ತೊಂದರೆ ಇದ್ದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಗೆ ಚಿತ್ತೋರ್‌ ಜಿಲ್ಲಾಧಿಕಾರಿ ಭರತ್‌ ಗುಪ್ತಾ ಭೇಟಿ ನೀಡಿದ್ದು, ಕಾರ್ಮಿಕರ ಆರೋಗ್ಯದ ಬಗ್ಗೆ ವೈದ್ಯರ ಬಳಿ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಸಂಜೆ ಸುಮಾರು 5 ಗಂಟೆ ವೇಳೆಗೆ ಪುಟಲಪಟ್ಟು ಹಾಲು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ ಉಂಟಾದ ಬಗ್ಗೆ ಮಾಹಿತಿ ದೊರೆಯಿತು. 20 ಕಾರ್ಮಿಕರನ್ನು ಚಿತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಮಹಿಳೆಯರಾಗಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಇವರನ್ನು ತಿರುಪತಿಯ ಎಸ್‌ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದು ಚಿತ್ತೂರು ಜಿಲ್ಲಾಧಿಕಾರಿ ಡಾ. ನಾರಾಯಣ್ ಭರತ್ ಗುಪ್ತಾ ಹೇಳಿದ್ದಾರೆ.

ಈ ಸಂಬಂಧ ನಾವು ತನಿಖೆಗೆ ಆದೇಶಿಸಿದ್ದೇವೆ ಮತ್ತು ಘಟನೆಯ ನಿಖರವಾದ ಕಾರಣವನ್ನು ತನಿಖೆ ನಂತರ ಬಹಿರಂಗಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುಪ್ತಾ ತಿಳಿಸಿದ್ದಾರೆ.  ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ತಿರುಪತಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ತನಿಖೆಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com