ತೆಲಂಗಾಣ: ಶ್ರೀಶೈಲಂ ಪವರ್‌ ಸ್ಟೇಷನ್‌ ಅಗ್ನಿ ಅವಘಡ: 9 ಮಂದಿ ಸಾವು

ತೆಲಂಗಾಣದ ಶ್ರೀಶೈಲಂ ಪವರ್‌ ಸ್ಟೇಷನ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಶೈಲಂ ಪವರ್‌ ಸ್ಟೇಷನ್‌ ಅಗ್ನಿ ಅವಘಡ
ಶ್ರೀಶೈಲಂ ಪವರ್‌ ಸ್ಟೇಷನ್‌ ಅಗ್ನಿ ಅವಘಡ

ಹೈದರಾಬಾದ್: ತೆಲಂಗಾಣದ ಶ್ರೀಶೈಲಂ ಪವರ್‌ ಸ್ಟೇಷನ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯುತ್ ಸ್ಥಾವರದ ನಾಲ್ಕನೇ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದೇ ಘಟಕದಿಂದ ಸ್ಫೋಟದ ಶಬ್ಧವೊಂದು ಕೇಳಿಬಂದಿತ್ತು. ಘಟನೆ ವೇಳೆ ಒಟ್ಟು 19 ಮಂದಿ ನಾಲ್ಕನೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಪೈಕಿ 10 ಮಂದಿ ಘಟನೆ ವೇಳೆ ಟನಲ್‌ ಮೂಲಕ ಹೊರಬಂದು  ಬಚಾವ್‌ ಆಗಿದ್ದಾರೆ ಎನ್ನಲಾಗಿದೆ. ಆದರೆ ಒಳಗಡೆ ಉಳಿದಿದ್ದ 9 ಮಂದಿಯ ಪೈಕಿ ಇದೀಗ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸ್ಪೋಟದಿಂದಾಗಿ ನಾಲ್ಕನೇ ಘಟಕದಲ್ಲಿ ಸಂಪೂರ್ಣ ಬೆಂಕಿ ಆವರಿಸುವ ಜೊತೆಗೆ ಸಂಪೂರ್ಣವಾಗಿ ಹೊಗೆ ತುಂಬಿಕೊಂಡಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಒಳ ಪ್ರವೇಶಕ್ಕೆ ಸಾಧ್ಯವಾಗಿರಲಿಲ್ಲ. ಸದ್ಯ ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಎಲ್ಲಾ ಕೆಲಸವನ್ನ ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ  ಆರಂಭವಾಗಿದೆ. ಅಲ್ಲದೇ ಹೊರ ಬಂದ ಹತ್ತು ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com