ಮತದಾರರಿಗೆ ಗ್ಲೌಸ್ ಒದಗಿಸಬೇಕು, ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು- ಚುನಾವಣಾ ಆಯೋಗ

 ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವಿಸ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವಿಸ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.

ಇವಿಎಂ ಒತ್ತುವ ಮತದಾರರಿಗೆ ಗ್ಲೌಸ್ ಒದಗಿಸಬೇಕು,ಕ್ವಾರಂಟೈನ್ ನಲ್ಲಿರುವ ಕೋವಿಡ್-19 ರೋಗಿಗಳಿಗೆ ಮತದಾನದ ದಿನ ಕೊನೆಯ ವೇಳೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಲಾಗಿದೆ.

ಕಂಟೈನ್ ಮೆಂಟ್ ವಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಮತದಾರರಿಗೆ ಪ್ರತ್ಯೇಕವಾದ ಮಾರ್ಗಸೂಚಿ ಹೊರಡಿಸಬೇಕೆಂದು ಆಯೋಗ ಹೇಳಿದೆ. 

ಚುನಾವಣೆಗೂ ಒಂದು ದಿನ ಮುಂಚಿತವಾಗಿ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಬೇಕು, ಪ್ರತಿ ಮತಗಟ್ಟೆಯ ಪ್ರವೇಶ ದ್ವಾರದಲ್ಲಿ
ಥರ್ಮಲ್ ಸ್ಕ್ಯಾನರ್ ಇರಬೇಕು. ಪ್ರತಿಯೊಂದು ಮತಗಟ್ಟೆಯ ಪ್ರವೇಶ ದ್ವಾರಗಳಲ್ಲಿ ಚುನಾವಣಾ ಅಥವಾ ಅರೆವೈದ್ಯಕೀಯ ಸಿಬ್ಬಂದಿ
ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸುವಂತೆ ಸೂಚಿಸಲಾಗಿದೆ.

ಒಂದು ಮತಗಟ್ಟೆಯಲ್ಲಿ ಗರಿಷ್ಠ 1500 ಮತದಾರರ ಬದಲಿಗೆ 1 ಸಾವಿರ ಇರಬೇಕು, ಮನೆ ಮನೆ ಪ್ರಚಾರ ಮಾಡುವಾಗ ಅಭ್ಯರ್ಥಿ ಸೇರಿದಂತೆ ಐವರು ಜನರು ಮಾತ್ರ ಇರಬೇಕು, ರೋಡ್ ಶೋ, ಸಭೆ, ಸಮಾರಂಭಗಳಲ್ಲಿ ಮಾರ್ಗಸೂಚಿ ಉಲ್ಲಂಘನೆಗಳನ್ನು ಆಕ್ಷೇಪಿಸಬಹುದಾಗಿದ್ದು. ಸಾರ್ವಜನಿಕ ಸಭೆ ನಡೆಯುವಂತಹ ಮೈದಾನಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಪಷ್ಟ ಗುರುತು ಹಾಕಿರುವುದನ್ನು ಜಿಲ್ಲಾ ಚುನಾವಣಾಧಿಕಾರಿಗಳು ಖಚಿತಪಡಿಸಿಕೊಂಡು ಅವಕಾಶ ನೀಡಬೇಕೆಂದು ಆಯೋಗ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com