ಮುಂಬೈ: 3 ಜೈನ ಮಂದಿರಗಳಲ್ಲಿ 2 ದಿನಗಳ ಪ್ರಾರ್ಥನೆಗೆ ಸುಪ್ರೀಂ ಕೋರ್ಟ್ ಅನುಮತಿ

ಮುಂಬೈ ನಲ್ಲಿರುವ 3 ಪ್ರಮುಖ ಜೈನ ಮಂದಿರಗಳಲ್ಲಿ 2 ದಿನಗಳ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆಗೆ ಸುಪ್ರೀಂ ಕೋರ್ಟ್ ಆ.21 ರಂದು ಅನುಮತಿ ನೀಡಿದೆ. 

Published: 21st August 2020 03:51 PM  |   Last Updated: 21st August 2020 03:51 PM   |  A+A-


Supreme court

ಸುಪ್ರೀಂ ಕೋರ್ಟ್

Posted By : Srinivas Rao BV
Source : PTI

ನವದೆಹಲಿ: ಮುಂಬೈ ನಲ್ಲಿರುವ 3 ಪ್ರಮುಖ ಜೈನ ಮಂದಿರಗಳಲ್ಲಿ 2 ದಿನಗಳ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆಗೆ ಸುಪ್ರೀಂ ಕೋರ್ಟ್ ಆ.21 ರಂದು ಅನುಮತಿ ನೀಡಿದೆ. 

ಮುಂಬೈ ನಲ್ಲಿರುವ ದಾದರ್, ಬೈಕುಲ್ಲಾ ಮತ್ತು ಚೆಂಬೂರ್ ನೈಬರ್ ಹುಡ್ಸ್ ನಲ್ಲಿ ಆ.15 ರಿಂದ 8 ದಿನಗಳ ಕಾಲ ಜೈನ ಮತಾನುಯಾಯಿಗಳ ಪರ್ಯುಷನ್‌ ಉತ್ಸವ (ಹಬ್ಬ) ಪ್ರಾರಂಭವಾಗಿದೆ.

ಕೋವಿಡ್-19 ರ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕ್ಷೇತ್ರಗಳಲ್ಲಿ ಉತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೋಕಾಲ್ ನ್ನು ಅನು ಸರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಅಗತ್ಯ ಕ್ರಮ ಕೈಗೊಂಡಲ್ಲಿ ಮಾತ್ರವೇ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯಗಳಲ್ಲಿ ನಡೆಸಲು ನಿರ್ಬಂಧ ಸಡಿಲಿಕೆ ಮಾಡಲಾಗುತ್ತಿದೆ. ಇದೇ ಆಧಾರದಲ್ಲಿ ಜೈನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು 2 ದಿನಗಳ ಕಾಲ ಅವಕಾಶ ನೀಡಲಾಗಿದೆ. 

ಆದರೆ ಈ ಪ್ರಕರಣದಲ್ಲಿ ನಿಬಂಧವನ್ನು ಸಡಿಲಿಕೆ ಮಾಡಿರುವುದನ್ನೇ ಎಲ್ಲಾ ಪ್ರಕರಣಗಳಿಗೂ ಅನ್ವಯ ಮಾಡಕೂಡದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅನುಮತಿ ಬೇಕಾಗಿದ್ದಲ್ಲಿ ಆ ನಿರ್ದಿಷ್ಟ ಪ್ರಕರಣದ ಆಧಾರದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧಾರದಿಂದ ಪೂರ್ವಾನುಮತಿ ಪಡೆಯಬೇಕೆಂದೂ ಕೋರ್ಟ್ ಹೇಳಿದೆ. 

ಗಣೇಶ ಹಬ್ಬಗಳಂತಹ ಸಾರ್ವಕನಿಕವಾಗಿ ಅದ್ಧೂರಿಯಾಗಿ ನಡೆಯುವ ಕಾರ್ಯಕ್ರಮಗಳಿಗೆ ಈ ಪ್ರಕರಣದ ಅನುಮತಿ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. 

ಪರ್ಯುಷನ್ ಅವಧಿಯಲ್ಲಿ ಜೈನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅನುಮತಿ ಕೋರಿ ಶ್ರೀ ಪಾರ್ಶ್ವತಿಲಕ ಶ್ವೇತಾಂಬರ್ ಮೂರ್ತಿಪೂಜಕ ತಪಗಚ್ಛ ಜೈನ್ ಟ್ರಸ್ಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 

ಆದರೆ ಮಹಾರಾಷ್ಟ್ರ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಆಕ್ಷೇಪ ಸಲ್ಲಿಸಿತ್ತು.  ಇದಕ್ಕೆ ಕೋರ್ಟ್ ಪುರಿ ಜಗನ್ನಾಥ ರಥಯಾತ್ರೆಯ ಉದಾಹರಣೆಯನ್ನು ನೀಡಿದ್ದು, ರಥಯಾತ್ರೆ ಸಂದರ್ಭದಲ್ಲಿ ಕಾಯ್ದುಕೊಂಡ ಸಾಮಾಜಿಕ ಅಂತರ, ತೆಗೆದುಕೊಳ್ಳಲಾಗಿದ್ದ ಮುನ್ನೆಚ್ಚರಿಕಾ ಕ್ರಮಗಳು, ಅತ್ಯಂತ ಕಡಿಮೆ ಜನರು ಭಾಗಿಯಾಗುವಂತಹ ವ್ಯವಸ್ಥೆ ಇದ್ದರೆ, ಅನುಮತಿಯನ್ನು ಏಕೆ ನಿರಾಕರಿಸಬೇಕು? ಇದನ್ನು ಹಿಂದೂ ದೇವಾಲಯಗಳಿಗೆ, ಮುಸ್ಲಿಮರ ಪವಿತ್ರ ಪ್ರದೇಶಗಳಿಗೂ ಏಕೆ ಅನ್ವಯಿಸಬಾರದೆಂದು ಪ್ರಶ್ನಿಸಿದೆ

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp