ಸುಶಾಂತ್ ಸಿಂಗ್  ಸಾವಿನ ಪ್ರಕರಣ: ಬಾಂದ್ರಾ ನಿವಾಸದಿಂದ ತನಿಖೆ ಪ್ರಾರಂಭಿಸಿದ ಸಿಬಿಐ, ಓರ್ವ ವ್ಯಕ್ತಿಯ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಪ್ರಾರಂಭಿಸಿರುವ ಸಿಬಿಐ ಹೆಸರು ಬಹಿರಂಗಪಡಿಸದ ವ್ಯಕ್ತಿಯನ್ನು  ಆತ ತಂಗಿದ್ದ ಅತಿಥಿಗೃಹಕ್ಕೆ ಶುಕ್ರವಾರ ವಿಚಾರಣೆಗಾಗಿ ಕರೆತಂದಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಗುರುವಾರ ದೆಹಲಿಯಿಂದ ಆಗಮಿಸಿದ ಸಿಬಿಐ ಅಧಿಕಾರಿಗಳ ಸಭೆ ಮುಂಬೈನ ಸಾಂತಕ್ರೂಜ್‌ನಲ್ಲಿರುವ ವಾಯ

Published: 21st August 2020 11:17 AM  |   Last Updated: 21st August 2020 11:17 AM   |  A+A-


ಸುಶಾಂತ್ ಸಿಂಗ್ ರಜಪೂತ್

Posted By : Raghavendra Adiga
Source : PTI

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಪ್ರಾರಂಭಿಸಿರುವ ಸಿಬಿಐ ಹೆಸರು ಬಹಿರಂಗಪಡಿಸದ ವ್ಯಕ್ತಿಯನ್ನು  ಆತ ತಂಗಿದ್ದ ಅತಿಥಿಗೃಹಕ್ಕೆ ಶುಕ್ರವಾರ ವಿಚಾರಣೆಗಾಗಿ ಕರೆತಂದಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಗುರುವಾರ ದೆಹಲಿಯಿಂದ ಆಗಮಿಸಿದ ಸಿಬಿಐ ಅಧಿಕಾರಿಗಳ ಸಭೆ ಮುಂಬೈನ ಸಾಂತಕ್ರೂಜ್‌ನಲ್ಲಿರುವ ವಾಯುಪಡೆಯ ಸಾರಿಗೆ ಕೇಂದ್ರದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

"ನಿನ್ನೆ ದೆಹಲಿಯಿಂದ ಆಗಮಿಸಿದ ಸಿಬಿಐ ಅಧಿಕಾರಿಗಳ ಸಭೆ ಮುಂಬೈನ ಸಾಂತಕ್ರೂಜ್ನಲ್ಲಿರುವ ವಾಯುಪಡೆಯ ಸಾರಿಗೆ ಕೇಂದ್ರದಲ್ಲಿ ನಡೆಯುತ್ತಿದೆ" ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ ನಟನ ಸಾವಿನ ಬಗ್ಗೆ ತನಿಖೆ ನಡೆಸಲು ಸಿಬಿಐ ಎಸ್‌ಐಟಿ ರಚಿಸಿದ್ದು ರಜಪೂತ್‌ ಬಾಂದ್ರಾ ನಿವಾಸದಿಂದ ತಂಡವು ತನಿಖೆ ಆರಂಭಿಸಲಿದೆ. "ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಮುಂಬೈನ ಸುಶಾಂತ್ ಅವರ ನಿವಾಸವಾಗಿರುವ ಅಪರಾಧದ ಸ್ಥಳಕ್ಕೆ ಭೇಟಿ ನೀಡುತ್ತಾರೆ."ಎಂದು ಸಿಬಿಐ ಮೂಲಗಳು ತಿಳಿಸಿವೆ.

ಇದಕ್ಕೆ ಮುನ್ನ ಅಪರಾಧ ಸ್ಥಳಕ್ಕೆ ಭೇಟಿ ನೀಡಿದ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ."ಮುಂಬೈ ಪೊಲೀಸರ ಅಧಿಕಾರಿಗಳು, ಇತರ ಸದಸ್ಯರು ಮತ್ತು ದಿವಂಗತ ನಟನ ಸ್ನೇಹಿತರನ್ನು ಪ್ರಶ್ನಿಸಬೇಕಿದೆ,ಮುಂಬೈ ಪೊಲೀಸರು ಈಗಾಗಲೇ ಪ್ರಶ್ನಿಸಿದ ಶಂಕಿತ ವ್ಯಕ್ತಿಗಳನ್ನು ಸಹ ಮತ್ತೆ ಪ್ರಶ್ನೆ ಮಾಡಲಾಗುತ್ತದೆ. ದೆ" ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಸಿಬಿಐ ಅಧಿಕಾರಿಗಳು "ಸಾವಿನ ಪ್ರಕರಣದಲ್ಲಿ ಯಾವುದೇ ಶಂಕಿತರನ್ನು ಬಂಧಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ

ಆಗಸ್ಟ್ 19 ರಂದು ಬಾಲಿವುಡ್ ನಟನ ಸಾವಿನ ಬಗ್ಗೆ ಪಾಟ್ನಾದಲ್ಲಿ ದಾಖಲಾದ ಎಫ್‌ಐಆರ್ ನ್ಯಾಯಸಮ್ಮತವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.

ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರ ಏಕ ಸದಸ್ಯ ಪೀಠವು ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಶಿಫಾರಸು ಮಾಡಲು ಬಿಹಾರ ಸರ್ಕಾರ ಸಮರ್ಥವಾಗಿದೆ ಎಂದು ಹೇಳಿತ್ತು. ಇದರ ಅನುಸಾರ ಸೆಂಟ್ರಲ್  ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಮುಂಬೈಗೆ ತಲುಪಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp