ಪಿಒಕೆಯಲ್ಲಿ ತೀವ್ರಗೊಂಡ ಪಾಕ್ ವಿರೋಧಿ ಪ್ರತಿಭಟನೆ: ಪಾಕ್ ಧ್ವಜ ಕೆಳಗಿಳಿಸಿ ಆಕ್ರೋಶ, ವಿಡಿಯೋ!

ಪಿಒಕೆಯಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Published: 22nd August 2020 02:28 PM  |   Last Updated: 22nd August 2020 02:28 PM   |  A+A-


ಸಂಗ್ರಹ ಚಿತ್ರ

Posted By : Vishwanath S
Source : Online Desk

ದಯಾಳ್(ಪಾಕ್ ಆಕ್ರಮಿತ ಕಾಶ್ಮೀರ): ಪಿಒಕೆಯಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆ್ಯಕ್ಟಿವಿಸ್ಟ್-ಪತ್ರಕರ್ತನೊಬ್ಬ ಪಾಕಿಸ್ತಾನದ ಧ್ವಜವನ್ನು ಕೆಳಗಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ದಯಾಳ್ ನಗರದ ವಸತಿ ಪ್ರದೇಶದ ಗೇಟ್ ಒಂದರ ಮೇಲೆ ಹಾರಿಸಲಾಗಿದ್ದ ಪಾಕ್ ಧ್ವಜವನ್ನು ಪತ್ರಕರ್ತ ತನ್ವೀರ್ ಅಹಮದ್ ಬಿಚ್ಚಿದ್ದಾರೆ. 

ಈ ವೇಳೆ ತನ್ವೀರ್ ನನ್ನು ಕೆಲವರು ಎಳೆದೊಯ್ಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಮೂಲಗಳ ಪ್ರಕಾರ ಪಾಕ್ ಪಡೆಗಳು ತನ್ವೀರ್ ನನ್ನು ಥಳಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. 

ಆಗಸ್ಟ್ 20ರಂದು ತನ್ವೀರ್ ಅಹ್ಮದ್ ಸಾಮಾಜಿಕಾ ಜಾಲತಾಣದಲ್ಲಿ ಪಿಒಕೆಯಲ್ಲಿ ಎಲ್ಲೆಲ್ಲಿ ಪಾಕ್ ಧ್ವಜ ಇದೆಯೋ ಅವುಗಳನ್ನು ತೆರವುಗೊಳಿಸಬೇಕು ಎಂದು ಪೋಸ್ಟ್ ಹಾಕಿದ್ದರು.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp