ರಾಫೆಲ್ ಡೀಲ್ ಗಾಗಿ ಭಾರತೀಯ ಖಜಾನೆಯಿಂದ ಹಣವನ್ನು ಲೂಟಿ ಮಾಡಲಾಗಿದೆ: ರಾಹುಲ್ ಗಾಂಧಿ

ರಾಫೆಲ್ ಯುದ್ಧ ವಿಮಾನಗಳ ಒಪ್ಪಂದದ ಬಗೆಗೆ  ಕೇಂದ್ರದ ಜೆಪಿ ಸರ್ಕಾರದ ವಿರುದ್ಧ ದಾಳಿ ಮುಂದುವರಿಸಿರುವ  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ರಾಫೆಲ್ ಗಾಗಿ  ಭಾರತೀಯ ಖಜಾನೆಯಿಂದ ಹಣವನ್ನು ಲೂಟಿ  ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ರಾಫೆಲ್ ಯುದ್ಧ ವಿಮಾನಗಳ ಒಪ್ಪಂದದ ಬಗೆಗೆ  ಕೇಂದ್ರದ ಜೆಪಿ ಸರ್ಕಾರದ ವಿರುದ್ಧ ದಾಳಿ ಮುಂದುವರಿಸಿರುವ  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ರಾಫೆಲ್ ಗಾಗಿ  ಭಾರತೀಯ ಖಜಾನೆಯಿಂದ ಹಣವನ್ನು ಲೂಟಿ  ಮಾಡಲಾಗಿದೆ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ನಲ್ಲಿ ರಾಹುಲ್, 'ರಾಫೆಲ್ ಗಾಗಿ ಭಾರತೀಯ ಬೊಕ್ಕಸದಿಂದ ಹಣವನ್ನು ಲೂಟಿ ಮಾಡಲಾಗಿದೆ' ಎಂದು ಹೇಳಿದ್ದಾರೆ.

ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್‌ನಿಂದ ಖರೀದಿಸಿದ ರಾಫೆಲ್ ವಿಮಾನಕ್ಕೆ ಸಂಬಂಧಿಸಿದ ಯಾವುದೇ ಆಫ್‌ಸೆಟ್ ಒಪ್ಪಂದಗಳ ಬಗ್ಗೆಸರ್ಕಾರಕ್ಕೆ  ಇತರೆ  ರಕ್ಷಣಾ ಆಫ್‌ಸೆಟ್ ಒಪ್ಪಂದಗಳ ಕುರಿತಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಯ ಬಗ್ಗೆ ಇರುವ ಯಾವುದೇ ವರದಿಯಿಲ್ಲ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.

ರಾಫೆಲ್ ಫ್‌ಸೆಟ್ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆಡಿಟರ್‌ಗೆ ನೀಡಲಲು ರಕ್ಷಣಾ ಸಚಿವಾಲಯ (ಎಂಒಡಿ) ನಿರಾಕರಿಸಿದೆ ಎಂಬ ಸುದ್ದಿಯ ತುಣುಕನ್ನೂ ರಾಹುಲ್ ಟ್ವೀಟ್ ನಲ್ಲಿ ಸೇರಿಸಿದ್ದಾರೆ.

ಇದೇ ಸಮಯದಲ್ಲಿ ರಾಹುಲ್ ಮಹಾತ್ಮ ಗಾಂಧಿಯವರ ಹೇಳಿಕೆಯನ್ನೂ ಉಲ್ಲೇಖಿಸಿದ್ದು  "ಸತ್ಯ ಒಂದೇ ಮಾರ್ಗಗಳು ಹಲವು"  ಎಂದಿದ್ದಾರೆ. ಅಲ್ಲದೆ ಈ ಒಪ್ಪಂದದಲ್ಲಿ ಸತ್ಯವು ಅಂತಿಮವಾಗಿ ಜನರಿಗೆ ತಿಳಿಯುತ್ತದೆ ಎನ್ನುವ ಮೂಲಕ ಕೇಂದ್ರದ ಬಗೆಗೆ ಮತ್ತೆ ತಮ್ಮ ಮಾತಿನ ಚಾಟಿ ಬೀಸಿದ್ದಾರೆ. 

ರಾಫೆಲ್ ಫೈಟರ್ ಜೆಟ್‌ಗಳ ಒಪ್ಪಂದದ ಕುರಿತು ರಾಹುಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಸರ್ಕಾರದ ಮೇಲೆ ನಿರಂತರವಾಗಿ ಟೀಕೆ ಮಾಡುತ್ತಿದ್ದು  ಈ ಒಪ್ಪಂದದಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com