ಕೋವಿಡ್ ಗೆ ಪರಿಣಾಮಕಾರಿಯಾದ ಆಂಟಿ-ಫೈಬ್ರೊಟಿಕ್ ಔಷಧಗಳು- ಸೇನೆ

ದೇಶದಲ್ಲಿ ಮೊದಲ ಬಾರಿಗೆ ಆಂಟಿ ಫೈಬ್ರೊಟಿಕ್ ಓಷಧಗಳನ್ನು ಕೋವಿಡ್-19 ಸಂಬಂಧಿತ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ನೆರವಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಸೇನೆ ಹೇಳಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಆಂಟಿ ಫೈಬ್ರೊಟಿಕ್ ಓಷಧಗಳನ್ನು ಕೋವಿಡ್-19 ಸಂಬಂಧಿತ ಉಸಿರಾಟದ ತೊಂದರೆ
ಅನುಭವಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ನೆರವಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ರೋಗಿಗಳು 
ಗುಣಮುಖರಾಗಿದ್ದಾರೆ ಎಂದು ಸೇನೆ ಹೇಳಿದೆ.

ಪುಣೆ ಮೂಲದ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊಥೊರಾಸಿಕ್ ಸೈನ್ಸ್  ( ಎಐಸಿಟಿಎಸ್ ) ಸಂಶೋಧಕರು ಈ ಔಷಧ ಬಹಳ
 ಪರಿಣಾಮಕಾರಿ ಎಂಬುದನ್ನು  ಪತ್ತೆ ಹಚ್ಚಿದ್ದಾರೆ. ರೋಗಿಗಳು ಸುರಕ್ಷಿತವಾಗಿ ಈ ಔಷಧವನ್ನು ಬಳಸಬಹುದಾಗಿದೆ. ಕೋವಿಡ್-19 ರೋಗಿಗಳು ಶ್ವಾಸಕೋಶ ತೊಂದರೆಯಿಂದ ಬಳಲುವುದನ್ನು ಈ ಔಷಧ ತಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಔಷಧದಿಂದ ಬೇಗನೆ ರೋಗಿಗಳು ಗುಣಮುಖರಾಗಲಿದ್ದಾರೆ. ಈ ಔಷಧದಿಂದ ರೋಗಿಗಳು ಲಾಭ ಪಡೆದುಕೊಳ್ಳುವಂತಾಗಲು 
ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಶ್ವಾಸಕೋಶದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿದ್ದ ನಾಲ್ವರು
ರೋಗಿಗಳಿಗೆ ಈ ಔಷಧ ನೀಡಿದ್ದ ಬಳಿಕ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com