ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಷಯ, ಮೂರನೇ ದೇಶದ ಅಗತ್ಯವಿಲ್ಲ:ಚೀನಾ-ಪಾಕಿಸ್ತಾನ ಉಲ್ಲೇಖಕ್ಕೆ ಭಾರತ ತಿರಸ್ಕಾರ

ಪಾಕಿಸ್ತಾನ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮಾತುಕತೆ ನಡೆಸಿದ ನಂತರ ಜಮ್ಮು-ಕಾಶ್ಮೀರ ಕುರಿತು ಹೊರಡಿಸಿರುವ ಜಂಟಿ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮಾತುಕತೆ ನಡೆಸಿದ ನಂತರ ಜಮ್ಮು-ಕಾಶ್ಮೀರ ಕುರಿತು ಹೊರಡಿಸಿರುವ ಜಂಟಿ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ್, ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ಭಾರತದ ಅಳಿಸಲಾಗದ ಅವಿಭಾಜ್ಯ ಅಂಗವಾಗಿದ್ದು ದೇಶದ ಆಂತರಿಕ ವಿಷಯಗಳಲ್ಲಿ ಮತ್ತೊಂದು ದೇಶ ಮಧ್ಯೆ ಪ್ರೇವೇಶಿಸುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಚೀನಾ-ಪಾಕಿಸ್ತಾನ ವಿದೇಶಾಂಗ ಸಚಿವರುಗಳ 2ನೇ ಸುತ್ತಿನ ಕಾರ್ಯತಂತ್ರದ ಮಾತುಕತೆಯಲ್ಲಿ ಈ ಹಿಂದೆ ಹೇಳಿದಂತೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಬಗ್ಗೆ ಉಲ್ಲೇಖ ಮಾಡಿರುವುದನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸುತ್ತದೆ ಎಂದು ಅನುರಾಗ್ ಶ್ರೀವಾಸ್ತವ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೊನ್ನೆ ಶುಕ್ರವಾರ ನಡೆದಿದ್ದ ಎರಡನೇ ವಾರ್ಷಿಕ ಕಾರ್ಯತಂತ್ರ ಮಾತುಕತೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಕಾಶ್ಮೀರ ವಿಷಯಗಳನ್ನು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು.

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿದ ಅನುರಾಗ್ ಶ್ರೀವಾಸ್ತವ್, ಇದು ಭಾರತದ ಪ್ರಾಂತ್ಯವಾಗಿದ್ದು ಅದನ್ನು ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com