ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ; ಭಾರತೀಯ ರೈಲ್ವೇ ಇಲಾಖೆಗೆ 561 ಕೋಟಿ ಹಣ ಸಂಗ್ರಹ, 4 ವರ್ಷಗಳಲ್ಲಿ ಆದಾಯ ಶೇ.38ರಷ್ಟು ಏರಿಕೆ

2019-20ರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರಿಗೆ ವಿಧಿಸಿದ ದಂಡದಿಂದಲೇ ಭಾರತೀಯ ರೈಲ್ವೆ ಇಲಾಖೆ ಬರೊಬ್ಬರಿ 561 ಕೋಟಿ ರೂ ಆದಾಯ ಗಳಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಆದಾಯ ಶೇ 38.57ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ: 2019-20ರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರಿಗೆ ವಿಧಿಸಿದ ದಂಡದಿಂದಲೇ ಭಾರತೀಯ ರೈಲ್ವೆ ಇಲಾಖೆ ಬರೊಬ್ಬರಿ 561 ಕೋಟಿ ರೂ ಆದಾಯ ಗಳಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಆದಾಯ ಶೇ 38.57ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಈ ವಿವರಗಳು ಲಭ್ಯವಾಗಿದ್ದು, 2019–20ರಲ್ಲಿ 1.10 ಕೋಟಿ ಟಿಕೆಟ್‌ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. 2016–20ರ ಅವಧಿಯಲ್ಲಿ ಟಿಕೆಟ್‌ ರಹಿತ  ಪ್ರಯಾಣಿಕರಿಂದಲೇ 1,938 ಕೋಟಿ ರೂ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. 2016–17ರಲ್ಲಿ ದಂಡದಿಂದ ಒಟ್ಟು 405.30 ಕೋಟಿ ರೂ ಸಂಗ್ರಹವಾಗಿದ್ದು, 2017–18ರಲ್ಲಿ 441.62 ಕೋಟಿ ರೂ ಮತ್ತು 2019–20ರಲ್ಲಿ 530.06 ಕೋಟಿ ರೂ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಟಿಕೆಟ್ ಇಲ್ಲದೆ ಪ್ರಯಾಣಿಸುವವರು ಟಿಕೆಟ್ ವೆಚ್ಚದ ಜೊತೆಗೆ ಕನಿಷ್ಠ 250ರೂ ದಂಡ ಕಟ್ಟುವುದು ಕಡ್ಡಾಯವಾಗಿದೆ. ಈ ದಂಡ ಪಾವತಿಗೆ ನಿರಾಕರಿಸಿದರೆ, ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಹಸ್ತಾಂತರಿಸಲಾಗುವುದು. ಅಲ್ಲದೆ ರೈಲ್ವೆ ಕಾಯ್ದೆಯ ಸೆಕ್ಷನ್ 137 ರ ಅಡಿಯಲ್ಲಿ ಪ್ರಕರಣ  ದಾಖಲಿಸಲಾಗುತ್ತದೆ. ಬಳಿಕ ಆತನನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳ ಮುಂದೆ ಹಾಜರು ಪಡಿಸಲಾಗುತ್ತಿದೆ. ನ್ಯಾಯಾಧೀಶರು ಇಂತಹ ಪ್ರಕರಣಗಳಿಗೆ 1 ಸಾವಿರ ರೂಗಳ ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ.

Related Stories

No stories found.

Advertisement

X
Kannada Prabha
www.kannadaprabha.com