ಹಗರಣದ ಕರ್ಮಕಾಂಡ:ಬಿಹಾರದಲ್ಲಿ 66 ವರ್ಷದ ವೃದ್ಧೆ 13 ತಿಂಗಳಲ್ಲಿ 8 ಮಕ್ಕಳನ್ನು ಹಡೆದಿದ್ದಾಳೆ!

ಸರ್ಕಾರದ ಅನುದಾನವನ್ನು, ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಅಲ್ಲಲ್ಲಿ ಕೇಳುತ್ತೇವೆ, ನೋಡುತ್ತೇವೆ. ಇಂತಹದ್ದೇ ಒಂದು ಕರ್ಮಕಾಂಡ ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಸರ್ಕಾರದ ಅನುದಾನವನ್ನು, ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಅಲ್ಲಲ್ಲಿ ಕೇಳುತ್ತೇವೆ, ನೋಡುತ್ತೇವೆ. ಇಂತಹದ್ದೇ ಒಂದು ಕರ್ಮಕಾಂಡ ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ನಡೆದಿದೆ.

66 ವರ್ಷದ ಮಹಿಳೆಯೊಬ್ಬರಿಗೆ 18 ತಿಂಗಳಲ್ಲಿ 8 ಮಕ್ಕಳಾಗಿದೆ ಎಂದು ತೋರಿಸಲಾಗಿದೆ. ಇಲ್ಲಿ ಸುಮಾರು 50 ಮಹಿಳೆಯರು ರಾಷ್ಟ್ರೀಯ ಮಾತೃತ್ವ ಯೋಜನೆಯಡಿ ತಿಂಗಳಿಗೆ ಕಳೆದೊಂದು ವರ್ಷದಿಂದ 1,400 ರೂಪಾಯಿ ಪಡೆಯುತ್ತಿದ್ದರು. ನಿಜವಾದ ಫಲಾನುಭವಿ ಮಹಿಳೆಯರಿಗೆ ಸಿಗದೆ ಬೇರೆಯವರು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದರು.

ಶಾಂತಿ ದೇವಿ ಎಂಬ ಮಹಿಳೆಯ ಕಿರಿಪುತ್ರನಿಗೇ 20 ವರ್ಷಕ್ಕಿಂತ ಹೆಚ್ಚಾಗಿದೆ. ಆದರೆ ಆರೋಗ್ಯ ಇಲಾಖೆಯಿಂದ 2019ರಿಂದ ಈಚೆಗೆ 1,400 ರೂಪಾಯಿಗಳಂತೆ 6 ಸಲ ಬಂದಿದೆ. ಆಕೆಗೆ ವೃದ್ಯಾಪ್ಯ ವೇತನ ಸಿಗುತ್ತಿದೆ.

ಅಂದರೆ ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವ ದಂಧೆಯೇ ನಡೆಯುತ್ತಿದೆ. ಮಶಹರಿ ಬ್ಲಾಕ್ ನಲ್ಲಿರುವ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆಗಳಿದ್ದು ಅದಕ್ಕೆ ಹಣ ಬರುತ್ತಿದ್ದು ಅದರಲ್ಲಿ ಸ್ಥಳೀಯ ಅಧಿಕಾರಿಗಳ ಕೈವಾಡ ಇರಬೇಕು, ಅವರನ್ನು ತನಿಖೆ ಮಾಡಬೇಕು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಮುದಾಯ ಸೇವಾ ಕೇಂದ್ರ(ಸಿಎಸ್ ಪಿ)ಯ ಕಾರ್ಯನಿರ್ವಾಹಕ ಸುಶಿಲ್ ಕುಮಾರ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡದಿಂದ ತನಿಖೆ ನಡೆಸುವಂತೆ ಮುಜಾಫರ್ ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಆದೇಶಿಸಿದ್ದಾರೆ.

ಅಧಿಕಾರಿಗಳು ಲಿಖಿತ ದೂರು ಸಲ್ಲಿಸಿದ ಕೂಡಲೇ ಎಫ್ ಐಆರ್ ದಾಖಲಿಸಲಾಗುವುದು ಎಂದು ಮುಜಾಫರ್ ಪುರ್ ಎಸ್ ಎಸ್ ಪಿ ಜಯಕಾಂತ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com