ರಾಷ್ಟ್ರಪಕ್ಷಿಗೆ ಧಾನ್ಯ ತಿನಿಸಿದ ಪ್ರಧಾನಿ ಮೋದಿ : ಲಕ್ಷಾಂತರ ಜನರ ಹೃದಯ ಗೆದ್ದ ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಪ್ರಕೃತಿ ಪ್ರಿಯರಾಗಿದ್ದು, ಹಲವು ಸಂದರ್ಭಗಳಲ್ಲಿ ಇದು ಬಹಿರಂಗಗೊಂಡಿದೆ. ಆದರೆ ನವಿಲುಗಳೊಂದಿಗಿನ ಅವರ ಸಂವಹನವನ್ನು ಸೆರೆಹಿಡಿದಿರುವ ಇತ್ತೀಚಿನ ವೀಡಿಯೊ ಬಹುತೇಕ ಜನರ ಹೃದಯ ಗೆದ್ದಿದೆ. 

Published: 23rd August 2020 05:54 PM  |   Last Updated: 23rd August 2020 05:54 PM   |  A+A-


Precious moments of PM Modi feeding Peacocks at residence

ರಾಷ್ಟ್ರಪಕ್ಷಿಗೆ ಧಾನ್ಯ ತಿನಿಸಿದ ಪ್ರಧಾನಿ ಮೋದಿ : ಲಕ್ಷಾಂತರ ಜನರ ಹೃದಯ ಗೆದ್ದ ವಿಡಿಯೋ

Posted By : Srinivas Rao BV
Source : UNI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಕೃತಿ ಪ್ರಿಯರಾಗಿದ್ದು, ಹಲವು ಸಂದರ್ಭಗಳಲ್ಲಿ ಇದು ಬಹಿರಂಗಗೊಂಡಿದೆ. ಆದರೆ ನವಿಲುಗಳೊಂದಿಗಿನ ಅವರ ಸಂವಹನವನ್ನು ಸೆರೆಹಿಡಿದಿರುವ ಇತ್ತೀಚಿನ ವೀಡಿಯೊ ಬಹುತೇಕ ಜನರ ಹೃದಯ ಗೆದ್ದಿದೆ. 

ಮೋದಿ ಅವರು ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.47 ನಿಮಿಷಗಳ ತುಣುಕನ್ನು ಹೊಂದಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ಗಂಡು ಹಾಗೂ ಹೆಣ್ಣು ನವಿಲುಗಳಿಗೆ ಆಹಾರ ನೀಡುವ ದೃಶ್ಯವಿದೆ. ಪ್ರಧಾನಿ ಮೋದಿ ಹಿಡಿದಿದ್ದ ತಟ್ಟೆಯಿಂದ ರಾಷ್ಟ್ರಪಕ್ಷಿ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದೆ. 

ಈ ವಿಡಿಯೋ ಪ್ರಧಾನ ಮಂತ್ರಿಯವರ 7, ಲೋಕ ಕಲ್ಯಾಣ್ ಮಾರ್ಗ ನಿವಾಸದಿಂದ ಬಂದಿದೆ. ನಂತರ ನವಿಲು ಪ್ರಧಾನಿಯವರ ಎದುರು ಉತ್ಸಾಹದಿಂದ ಗರಿಗೆದರಿ, ನಲಿಯುವ ದೃಶ್ಯವೂ ಇದೆ. ಮೋದಿ ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ 45 ಮಿಲಿಯನ್ ಅನುಯಾಯಿಗಳೊಂದಿಗೆ ಐಡಿಲಿಕ್ ದೃಶ್ಯಕಲಾವ್ಯವನ್ನು ಹಂಚಿಕೊಂಡಿದ್ದಾರೆ. ಅಲ್ಪಾವಧಿಯಲ್ಲಿಯೇ, ಒಂದು ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp