'ತುಕ್ಡೆ ತುಕ್ದೆ ಗ್ಯಾಂಗ್ ಅಧಿಕಾರದಲ್ಲಿ' : ಶಶಿ ತರೂರ್

ಹಿಂದಿ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ವೆಬ್ ನಾರ್ ವೊಂದರಿಂದ  ಹೊರ ಹೋಗುವಂತೆ ಹಿಂದಿಯೇತರ ಯೋಗ ಶಿಕ್ಷಕರು ಮತ್ತು ವೈದ್ಯಕೀಯ ಅಭ್ಯಾಸ ನಿರತರಿಗೆ ಅಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿದ್ದಾರೆ ಎಂಬ ಆರೋಪ ಕುರಿತಂತೆ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಹಿಂದಿ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವೆಬ್ ನಾರ್ ವೊಂದರಿಂದ  ಹೊರ ಹೋಗುವಂತೆ ಹಿಂದಿಯೇತರ ಯೋಗ ಶಿಕ್ಷಕರು ಮತ್ತು ವೈದ್ಯಕೀಯ ಅಭ್ಯಾಸನಿರತರಿಗೆ ಅಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿದ್ದಾರೆ ಎಂಬ ಆರೋಪ ಕುರಿತಂತೆ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಹಿಂದಿ ಒಂದು ವೇಳೆ ಅರ್ಥವಾಗದಿದ್ದರೆ ವೆಬ್ ನಾರ್ ನಿಂದ ಹೊರ ಹೋಗಿ ಎಂದು ತಮಿಳರಿಗೆ ಭಾರತ ಸರ್ಕಾರದ ಕಾರ್ಯದರ್ಶಿಯೊಬ್ಬರು ಹೇಳಿರುವುದು ಅತ್ಯುದ್ಬುತವಾಗಿದೆ. ಸರ್ಕಾರಕ್ಕೆ ಯಾವುದೇ ಶಿಷ್ಟತೆ ಇದ್ದರೆ ಕೂಡಲೇ ಆ ಕಾರ್ಯದರ್ಶಿಯನ್ನು  ತಮಿಳು ನಾಗರಿಕ ಸೇವಕನನ್ನಾಗಿ ನೇಮಿಸಬೇಕು! ಈಗ ಅಧಿಕಾರದಲ್ಲಿರುವ ತುಕ್ಡೆ-ತುಕ್ಡೆ ಗ್ಯಾಂಗ್ ದೇಶದ ಏಕತೆಯನ್ನು ನಾಶಮಾಡಲು ನಿರ್ಧರಿಸಿದೆಯೇ? ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಿಂದಿ ಭಾಷೆ ಚೆನ್ನಾಗಿ ಬರಲಿದ್ದು, ಹಿಂದಿಯಲ್ಲಿ ಮಾತನಾಡಲು ಆದ್ಯತೆ ನೀಡುತ್ತೇನೆ. ಇಂಗ್ಲೀಷ್ ಬೇಕೆನ್ನುವವರು ಹೊರ ಹೋಗಬಹುದು ಎಂದು ಕೊಟೆಚಾ ಹೇಳುವ 40 ಸೆಕೆಂಡ್ ಗಳ  ವಿಡಿಯೋ ಕ್ಲಿಫ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com