ಚೀನಾ ಗಡಿಯಲ್ಲಿ ಶೋಲ್ಡರ್ ಫೈರ್ಡ್ ಏರ್ ಡಿಫೆನ್ಸ್ ಮಿಸೈಲ್ಸ್ ನಿಯೋಜನೆ! 

ಎಲ್ಎಸಿ ಯಲ್ಲಿ ಚೀನಾ ಹೆಲಿಕಾಫ್ಟರ್ ಗಳ ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಭಾರತ ಈಶಾನ್ಯ ಲಡಾಖ್ ನ ನಿರ್ಣಾಯಕ ಪ್ರದೇಶಗಳಲ್ಲಿ ಶೋಲ್ಡರ್ ಫೈರ್ಡ್ ಏರ್ ಡಿಫೆನ್ಸ್ ಮಿಸೈಲ್ಸ್ ನ್ನು ನಿಯೋಜಿಸಿದೆ. 
ಚೀನಾ ಗಡಿಯಲ್ಲಿ ಶೋಲ್ಡರ್ ಫೈರ್ಡ್ ಏರ್ ಡಿಫೆನ್ಸ್ ಮಿಸೈಲ್ಸ್ ನಿಯೋಜನೆ!
ಚೀನಾ ಗಡಿಯಲ್ಲಿ ಶೋಲ್ಡರ್ ಫೈರ್ಡ್ ಏರ್ ಡಿಫೆನ್ಸ್ ಮಿಸೈಲ್ಸ್ ನಿಯೋಜನೆ!

ನವದೆಹಲಿ: ಎಲ್ಎಸಿ ಯಲ್ಲಿ ಚೀನಾ ಹೆಲಿಕಾಫ್ಟರ್ ಗಳ ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಭಾರತ ಈಶಾನ್ಯ ಲಡಾಖ್ ನ ನಿರ್ಣಾಯಕ ಪ್ರದೇಶಗಳಲ್ಲಿ ಶೋಲ್ಡರ್ ಫೈರ್ಡ್ ಏರ್ ಡಿಫೆನ್ಸ್ ಮಿಸೈಲ್ಸ್ ನ್ನು ನಿಯೋಜಿಸಿದೆ. 

ರಷ್ಯಾ ಮೂಲದ ಇಗ್ಲಾ ಏರ್ ಡಿಫೆನ್ಸ್ ಸಿಸ್ಟಮ್ ಸಹಿತವಾಗಿ ಭಾರತೀಯ ಸಿಬ್ಬಂದಿಗಳನ್ನು ನಿರ್ಣಾಯಕ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದ್ದು ವಾಯು ಗಡಿಯನ್ನು ಉಲ್ಲಂಘಿಸಿ ಬರುವ ಶತ್ರು ರಾಷ್ಟ್ರದ ಸೇನಾ ಹೆಲಿಕಾಫ್ಟರ್ ಗಳ ಬಗ್ಗೆ ನಿಗಾ ವಹಿಸಲಿದೆ ಎಂದು ಎಎನ್ಐ ಗೆ ಸೇನಾ ಮೂಲಗಳು ತಿಳಿಸಿವೆ. 

ಭಾರತೀಯ ಸೇನೆ ಹಾಗೂ ವಾಯು ಪಡೆ ಎರಡೂ ರಷ್ಯಾ ಮೂಲಕದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಕೆ ಮಾಡುತ್ತಿದ್ದು, ಯುದ್ಧ ಸನ್ನಿವೇಶದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತವೆ. 

ಎಲ್ಎಸಿ ಬಳಿ ತನ್ನ ಕಣ್ಗಾವಲನ್ನೂ ಹೆಚ್ಚಿಸಿಕೊಂಡಿರುವ ಭಾರತ, ಶತ್ರುಗಳ ಚಲನವಲನಗಳ ಬಗ್ಗೆ ನಿಗಾ ಇಡಲು ಭೂಮಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಹಾಗೂ ರಡಾರ್ ಗಳ ನಿಯೋಜನೆಯಲ್ಲಿ ತೊಡಗಿದೆ. 

ಇತ್ತೀಚಿನ ದಿನಗಳಲ್ಲಿ ಚೀನಾ ಹೆಲಿಕಾಫ್ಟರ್ ಗಳು ಭಾರತೀಯ ವಾಯು ಪ್ರದೇಶವನ್ನು ಅತಿಕ್ರಮಣ ಮಾಡಲು ಯತ್ನಿಸಿದ ಸುದ್ದಿ ಬಹಿರಂಗವಾಗಿತ್ತು. ಈ ಬೆನ್ನಲ್ಲೇ ಭಾರತೀಯ ವಾಯುಪಡೆ Su-30MKI ನ್ನು ನಿಯೋಜನೆ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com