ನಾಳೆಯಿಂದ ವೈಷ್ಣೋದೇವಿ ಯಾತ್ರೆಗೆ ಆನ್‌ಲೈನ್ ನೋಂದಣಿ, ಹೆಲಿಕಾಪ್ಟರ್ ಬುಕಿಂಗ್ ಆರಂಭ

ಶ್ರೀ ಮಾತಾ ವೈಷ್ಣೋದೇವಿ ಯಾತ್ರಿಕರ ಆನ್ ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ಬುಧವಾರದಿಂದ ಆರಂಭವಾಗಲಿದೆ.

Published: 25th August 2020 04:51 PM  |   Last Updated: 25th August 2020 04:51 PM   |  A+A-


Mata Vaishno Devi Temple

ವೈಷ್ಣೋದೇವಿ ದೇಗುಲ

Posted By : lingaraj
Source : UNI

ಜಮ್ಮು: ಶ್ರೀ ಮಾತಾ ವೈಷ್ಣೋದೇವಿ ಯಾತ್ರಿಕರ ಆನ್ ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ಬುಧವಾರದಿಂದ ಆರಂಭವಾಗಲಿದೆ.

ಆಗಸ್ಟ್ 26 ರಿಂದ ಸೆ. 5 ರವರೆಗೆ ವೈಷ್ಣೋದೇವಿ ಆನ್ ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ಲಭ್ಯವಿರಲಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಯುಎನ್ ಐಗೆ ತಿಳಿಸಿದ್ದಾರೆ.

ಇದು ನಿರಂತರ ಪ್ರಕ್ರಿಯೆಯಾಗಲಿದೆ. ಯಾತ್ರಿಕರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಕತ್ರಾ ತಲುಪುವ ಮುನ್ನ ಹೆಲಿಕಾಪ್ಟರ್ ಟಿಕೆಟ್ ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಅಧಿಕೃತ ಮಾಹಿತಿಯಂತೆ, ಇತರ ರಾಜ್ಯಗಳಿಂದ ಬರುವ ಯಾತ್ರಿಕರ ಕೋಟಾವನ್ನು ದಿನಕ್ಕೆ 100 ರಿಂದ 250ಕ್ಕೆ ಹೆಚ್ಚಿಸಲಾಗಿದೆ. 

ಸೋಮವಾರ, ದೇವಾಲಯದ ಮಂಡಳಿ ಜಮ್ಮು-ಕಾಶ್ಮೀರದ ಹೊರಗಿನಿಂದ ಬರುವ ಯಾತ್ರಿಕರಿಗೆ ಕೊವಿಡ್ ನೆಗಟೀವ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಿದೆ. ಈ ವರದಿ 48 ಗಂಟೆಗಳಿಗಿಂತ ಹಳೆಯದಾಗಿರಬಾರದು.

ಕೊವಿಡ್-19 ನೆಗಟೀವ್ ಪರೀಕ್ಷಾ ವರದಿ ಇಲ್ಲದೆ ಯಾತ್ರೆಗೆ ಅನುಮತಿಸಲಾಗುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ಎಲ್ಲ ಭಕ್ತರು ಸಹಕರಿಸಬೇಕು ಎಂದು ರಮೇಶ್ ಕುಮಾರ್ ಮನವಿ ಮಾಡಿದ್ದಾರೆ. 

ಕೊವಿಡ್ -19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 18ರಂದು ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp