ದೆಹಲಿಯ ಸಂಸತ್ ಭವನದ ಬಳಿ ಸಿಆರ್ ಪಿಎಫ್ ನಿಂದ ಜಮ್ಮು-ಕಾಶ್ಮೀರದ ಶಂಕಿತ ವ್ಯಕ್ತಿ ಬಂಧನ!
ದೆಹಲಿಯ ಸಂಸತ್ ಭವನದ ಬಳಿ ಸಿಆರ್ ಪಿಎಫ್ ನಿಂದ ಜಮ್ಮು-ಕಾಶ್ಮೀರದ ಶಂಕಿತ ವ್ಯಕ್ತಿ ಬಂಧನ!

ದೆಹಲಿಯ ಸಂಸತ್ ಭವನದ ಬಳಿ ಸಿಆರ್ ಪಿಎಫ್ ನಿಂದ ಜಮ್ಮು-ಕಾಶ್ಮೀರದ ಶಂಕಿತ ವ್ಯಕ್ತಿ ಬಂಧನ!

ದೆಹಲಿಯ ಸಂಸತ್ ಭವನದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಜಮ್ಮು-ಕಾಶ್ಮೀರದ ವ್ಯಕ್ತಿಯೋರ್ವನನ್ನು ದೆಹಲಿಯ ವಿಜಯ್ ಚೌಕ್ ಬಳಿ ಸಿಆರ್ ಪಿಎಫ್ ಪೊಲೀಸರು ಬಂಧಿಸಿದ್ದಾರೆ. 

ನವದೆಹಲಿ: ದೆಹಲಿಯ ಸಂಸತ್ ಭವನದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಜಮ್ಮು-ಕಾಶ್ಮೀರದ ವ್ಯಕ್ತಿಯೋರ್ವನನ್ನು ದೆಹಲಿಯ ವಿಜಯ್ ಚೌಕ್ ಬಳಿ ಸಿಆರ್ ಪಿಎಫ್ ಪೊಲೀಸರು ಬಂಧಿಸಿದ್ದಾರೆ. 

ವರದಿಗಳ ಪ್ರಕಾರ ಬಂಧಿತ ವ್ಯಕ್ತಿ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯವನಾಗಿದ್ದಾನೆ. ಸಂಸತ್ ಭವನದ ಎದುರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಕರ್ತವ್ಯ ನಿರತ ಸಿಆರ್ ಪಿಎಫ್ ಸಿಬ್ಬಂದಿ ಬಂಧಿಸಿದ್ದಾರೆ. 

ಪ್ರಾಥಮಿಕ ವಿಚಾರಣೆ ವೇಳೆ ಪೊಲೀಸರಿಗೆ ಈ ವ್ಯಕ್ತಿ ತನ್ನ ಬಗ್ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆ. ಆತನಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಕೋಡ್ ವರ್ಡ್ ಗಳನ್ನು ಹೊಂದಿದ ಮಾಹಿತಿಯೊಂದು ಲಭ್ಯವಾಗಿದೆ. ಬಂಧಿತ ವ್ಯಕ್ತಿಯಿಂದ ಎರಡು ಐಡಿ ಕಾರ್ಡ್ ಗಳು- ಒಂದು ಆಧಾರ್ ಕಾರ್ಡ್ ಹಾಗೂ ವಾಹನ ಚಾಲನೆ ಪರವಾನಗಿಯನ್ನೂ ವಶಪಡಿಸಿಕೊಳ್ಳಲಾಗಿದೆ. 

ಎರಡೂ ಐಡಿಗಳಲ್ಲಿ ಬೇರೆ ಬೇರೆ ಹೆಸರಿದ್ದು, ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದರುವುದು ಮತ್ತಷ್ಟು ಅನುಮಾನಕ್ಕೀಡು ಮಾಡಿದೆ. ದೆಹಲಿ ಪೊಲೀಸರಿಗೆ ಈತನನ್ನು ಹಸ್ತಾಂತರಿಸಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com