ಆಫ್ರಿಕನ್ ಸ್ವೈನ್ ಫೀವರ್ ನಂತರ ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ!

ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ  ಹರಡುತ್ತಿರುವುದು ಪತ್ತೆಯಾಗಿದೆ. 
ಆಫ್ರಿಕನ್ ಸ್ವೈನ್ ಫೀವರ್ ನಂತರ ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ!
ಆಫ್ರಿಕನ್ ಸ್ವೈನ್ ಫೀವರ್ ನಂತರ ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ!

ಗುವಾಹಟಿ: ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ  ಹರಡುತ್ತಿರುವುದು ಪತ್ತೆಯಾಗಿದೆ. 

ಎಲ್ಎಸ್ ಡಿ ಎಂದು ಇದನ್ನು ಗುರುತಿಸಲಾಗಿದ್ದು, ಸರ್ಕಾರದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪಶುವೈದ್ಯರು, ಪಶುವೈದ್ಯಕೀಯ ಚಿಕಿತ್ಸಾಲಯಗಳಿಗೆ, ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ, ಅರಿವು ಮೂಡಿಸುವುದಕ್ಕೆ ತಿಳಿಸಲಾಗಿದೆ. 

ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಎಲ್ಎಸ್ ಡಿ ಸಮಸ್ಯೆ ಕಾಣಿಸಿಕೊಂಡಿದ್ದು, ಚಾಚರ್, ಕರೀಂಗಂಜ್, ಹೈಲಾಕಂಡಿ ಜಿಲ್ಲೆಗಳಲ್ಲಿ ಈವರೆಗೂ ಹಸುಗಳಲ್ಲಿ ಎಲ್ಎಸ್ ಡಿ ಕಾಣಿಸಿಕೊಂಡಿದೆ. 

ಸೊಳ್ಳೆ, ರಕ್ತ ಹೀರುವ ಕೀಟಗಳಿಂದಾಗಿ ಈ ರೋಗ ಹರಡಲಿದ್ದು, ಹಸುಗಳಿಂದ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 

ಹಸುಗಳಿಗೆ ಈ ರೋಗ ಹರಡಿದರೆ ಜ್ವರ ಕಾಣಿಸಿಕೊಳ್ಳುತ್ತದೆ, ನಂತರ ಚರ್ಮ ಬೊಬ್ಬೆ ಬಂದಂತೆ ಊತ ಕಾಣಿಸಿಕೊಳ್ಳುತ್ತದೆ.  ಅಷ್ಟೇ ಅಲ್ಲದೇ ದುಗ್ಧರಸ ಗ್ರಂಥಿಗಳ ಊತವು ಸಹ ಕಾಣಿಸಿಕೊಳ್ಳಲಿದೆ ಎಂದು ಡಾ.ಪ್ರದೀಪ್ ಗೊಗೋಯ್ ಹೇಳಿದ್ದಾರೆ. 

ಸಾಮಾನ್ಯವಾಗಿ ಈ ರೋಗ ಬಂದ ಹಸುಗಳು ಎರಡರಿಂದ ಮೂರು ವಾರಗಳಲ್ಲಿ ಚೇತರಿಸಿಕೊಳ್ಳುತ್ತವೆ, ಆದರೆ ಹಾಲಿನ ಇಳುವರಿಯೂ ಕಡಿಮೆಯಾಗಲಿದೆ.  ಸಾವಿನ ಪ್ರಮಾಣ 1-5% ಇದೆ ಎಂದು ಡಾ. ಗೊಗೋಯ್ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com