2010ರಿಂದೀಚೆಗೆ ಪಾಕ್ ಯೋಧರ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು 60ಪಟ್ಟು ಹೆಚ್ಚಳ: ಗೃಹ ಸಚಿವಾಲಯ

ಪಾಕಿಸ್ತಾನದ ಯೋಧರು ಕಳೆದ 3 ವರ್ಷದಲ್ಲಿ 8500 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, 2010ರಿಂದೀಚೆಗೆ ಕದನ ವಿರಾಮ ಉಲ್ಲಂಘನೆ ಪ್ರಕರಣಗಳ ಪ್ರಮಾಣ 60ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನದ ಯೋಧರು ಕಳೆದ 3 ವರ್ಷದಲ್ಲಿ 8500 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, 2010ರಿಂದೀಚೆಗೆ ಕದನ ವಿರಾಮ ಉಲ್ಲಂಘನೆ ಪ್ರಕರಣಗಳ ಪ್ರಮಾಣ 60ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಜಮ್ಮು ಮೂಲದ ಕಾರ್ಯಕರ್ತರು ಸಲ್ಲಿಸಿರುವ ಆರ್‌ಟಿಐ ಅರ್ಜಿಗೆ ಉತ್ತರ ನೀಡಿರುವ ಗೃಹ ವ್ಯವಹಾರಗಳ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರದ ಗಡಿಯ ನಿಗದಿಯಾಗಿರುವ ಕದನ ವಿರಾಮವನ್ನು ಪಾಕಿಸ್ತಾನ ಸೇನೆ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 8,500 ಬಾರಿ ಉಲ್ಲಂಘಿಸಿದೆ. ಜಮ್ಮು ಕಾಶ್ಮೀರದ ಗಡಿ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರು ಪ್ರತಿನಿತ್ಯ ಪಾಕಿಸ್ತಾನದಿಂದ ಕನಿಷ್ಠ 9 ಕದನ ವಿರಾಮ ಉಲ್ಲಂಘನೆಗೆ ಸಾಕ್ಷಿಯಾಗಿದ್ದಾರೆ. ಇದರಿಂದ ಜೀವ ಮತ್ತು ಆಸ್ತಿ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

2018ರ ಜ.1ರಿಂದ 2020ರ ಜುಲೈವರೆಗೆ ಗಡಿಯಲ್ಲಿ ಪಾಕಿಸ್ತಾನ 8,571 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಇದರಲ್ಲಿ 63 ನಾಗರಿಕರು ಮತ್ತು 56 ಭದ್ರತಾ ಪಡೆಯ ಸಿಬ್ಬಂದಿಯನ್ನೊಳಗೊಂಡ ಕನಿಷ್ಠ 119 ಭಾರತೀಯರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. 308 ನಾಗರಿಕರು ಮತ್ತು 300 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಎಂದು ಸಚಿವಾಲಯ ಮಾಹಿತಿ ನೀಡಿದೆ.

2010 ನೇ ಸಾಲಿಗೆ ಹೋಲಿಸಿದರೆ, 2019 ರ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಆಕ್ರಮಣಕಾರಿ ಘಟನೆಗಳು ಸುಮಾರು 50 ಪಟ್ಟು ಹೆಚ್ಚಾಗಿದೆ ಮತ್ತು ಜುಲೈ 2020 ರವರೆಗೆ ಇನ್ನೂ 60 ಪಟ್ಟು ಹೆಚ್ಚಾಗಿದೆ, 2010 ರಂತೆ ಕೇವಲ 70 ಮಾತ್ರ ಘಟನೆಗಳು ಮತ್ತು 2019 ರಲ್ಲಿ, ಇಂತಹ 3479  ಘಟನೆಗಳು ವರದಿಯಾಗಿವೆ ಮತ್ತು ಜುಲೈ -2020 ರವರೆಗೆ 2952 ಕದನ ವಿರಾಮ ಉಲ್ಲಂಘನೆಯ ಘಟನೆಗಳು ದಾಖಲಾಗಿವೆ.

2010 ರಿಂದ ಇಲ್ಲಿಯವರೆಗೆ ಪಾಕಿಸ್ತಾನವು ಗಡಿಗಳಲ್ಲಿನ ಶಾಂತಿ ಒಪ್ಪಂದವನ್ನು ಕನಿಷ್ಠ 11,572 ಬಾರಿ ಉಲ್ಲಂಘಿಸಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯಿಂದ ಗುಂಡಿನ ದಾಳಿ ನಡೆಸಿದೆ. ಈ ವರ್ಷ ಜುಲೈ 2,952 ರವರೆಗೆ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ 15 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 38 ಮಂದಿ ಗಾಯಗೊಂಡಿದ್ದಾರೆ ಮತ್ತು 8 ಯೋಧರ ಸಾವಿಗೆ ಕಾರಣರಾಗಿದ್ದಾರೆ ಮತ್ತು 62 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com