ಪುಣೆ: ಆಂಬುಲೆನ್ಸ್ ಚಾಲಕನಾಗಿ, ಕೊರೋನಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ವೈದ್ಯ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಕೊರೋನಾ ವೈರಸ್ ರೋಗಿಯನ್ನು ಇಲ್ಲಿನ ಆರೈಕೆ ಕೇಂದ್ರದಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಓಡಿಸಿದ 30 ವರ್ಷದ ವೈದ್ಯರನ್ನು ನಿಜವಾದ "ಕೊರೋನಾ ವಾರಿಯರ್" ಎಂದು ಪ್ರಶಂಸಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಕೊರೋನಾ ವೈರಸ್ ರೋಗಿಯನ್ನು ಇಲ್ಲಿನ ಆರೈಕೆ ಕೇಂದ್ರದಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಓಡಿಸಿದ 30 ವರ್ಷದ ವೈದ್ಯರನ್ನು ನಿಜವಾದ "ಕೊರೋನಾ ವಾರಿಯರ್" ಎಂದು ಪ್ರಶಂಸಿಸಲಾಗುತ್ತಿದೆ.

ಆಂಬುಲೆನ್ಸ್ ಚಾಲಕ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಮತ್ತು ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಇಲ್ಲದಿರುವುದರಿಂದ, ರೋಗಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಡಾ. ರಂಜೀತ್ ನಿಕಮ್ ಅವರು ತಾವೇ ಆಂಬುಲನ್ಸ್ ಚಾಲನೆ ಮಾಡಿದ್ದಾರೆ. ಅವರಿಗೆ ವೈದ್ಯ ರಾಜೇಂದ್ರ ರಾಜ್‌ಪುರೋಹಿತ್ ಅವರು ಸಹ ಸಾಥ್ ನೀಡಿದ್ದಾರೆ.

ಕೊವಿಡ್ ಕೇರ್ ಸೆಂಟರ್ ನಲ್ಲಿದ್ದ 71 ವರ್ಷದ ವೃದ್ಧನ ಆರೋಗ್ಯ ಗಂಭೀರವಾಗ ಹಿನ್ನೆಲೆಯಲ್ಲಿ ಡಾ. ರಂಜಿತ್ ಅವರು ಕೂಡಲೇ ಆಂಬುಲನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊವಿಡ್ ಕೇರ್ ಸೆಂಟರ್ ನಲ್ಲಿ ಒಂದು ಆಂಬುಲೆನ್ಸ್ ವ್ಯಾನ್ ಇದೆ. ಆದರೆ ಅದರ ಚಾಲಕ ಕೆಲವೇ ಗಂಟೆಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಸ್ಥಿತಿಯಲ್ಲಿ ವ್ಯಾನ್ ಓಡಿಸಲು ಅವರನ್ನು ಕೇಳುವುದು ಸೂಕ್ತವಲ್ಲ. ಆದ್ದರಿಂದ ನಾವು '108' ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಿದೇವು. ಆದರೆ ಕರೆ ಸಂಪರ್ಕಗೊಳ್ಳಲಿಲ್ಲ. ನಾವು ಇನ್ನೊಬ್ಬ ಚಾಲಕನಿಗೆ ಸಹ ಕರೆ ಮಾಡಿದ್ದೇವೆ ಆದರೆ ಅವನು ಸಹ ತಲುಪಲಿಲ್ಲ. ಹೀಗಾಗಿ ನಾನೇ ಚಾಲನೆ ಮಾಡಿದೆ ಎಂದು ನಿಕಮ್ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com