ಅಧಿವೇಶನ ಆರಂಭವಾಗುವ 72 ಗಂಟೆಗಳ ಮುನ್ನ ಎಲ್ಲಾ ಸಂಸದರು ಕೊವಿಡ್ ಟೆಸ್ಟ್ ಮಾಡಿಸಿ:ಲೋಕಸಭಾ ಸ್ಪೀಕರ್

ಸಂಸತ್ ಮುಂಗಾರು ಅಧಿವೇಶನ ಆರಂಭವಾಗು ಕನಿಷ್ಠ 72 ಗಂಟೆಗಳ ಮುನ್ನ ಎಲ್ಲಾ ಸಂಸದರು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಮನವಿ ಮಾಡಿದ್ದಾರೆ.
ಓಂ ಬಿರ್ಲಾ
ಓಂ ಬಿರ್ಲಾ

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾಗು ಕನಿಷ್ಠ 72 ಗಂಟೆಗಳ ಮುನ್ನ ಎಲ್ಲಾ ಸಂಸದರು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಮನವಿ ಮಾಡಿದ್ದಾರೆ.

ಮುಂಗಾರು ಅಧಿವೇಶನವು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಿ ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

ಸಂಸದರಲ್ಲದೆ, ಸಚಿವಾಲಯಗಳ ಅಧಿಕಾರಿಗಳು, ಮಾಧ್ಯಮಗಳ ಪ್ರತಿನಿಧಿಗಳು ಮತ್ತು ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳ ಸಿಬ್ಬಂದಿ ಸೇರಿದಂತೆ ಸಂಸತ್ತಿನ ಆವರಣ ಪ್ರವೇಶಿಸುವ ನಿರೀಕ್ಷೆಯಿರುವವರೆಲ್ಲರೂ ಅಧಿವೇಶನ ಪ್ರಾರಂಭವಾಗುವ ಮೊದಲು ಕೊವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಬಿರ್ಲಾ ಹೇಳಿದ್ದಾರೆ.

ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಧಿವೇಶನದ ವ್ಯವಸ್ಥೆಗಳನ್ನು ಅಂತಿಮಗೊಳಿಸಲು ಲೋಕಸಭಾ ಸ್ಪೀಕರ್ ಶುಕ್ರವಾರ ಆರೋಗ್ಯ ಸಚಿವಾಲಯ, ಐಸಿಎಂಆರ್, ಏಮ್ಸ್, ಡಿಆರ್ಡಿಒ ಮತ್ತು ದೆಹಲಿ ಸರ್ಕಾರದ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದರು.

ಅಧಿವೇಶನದ ವೇಳೆ ಶೂನ್ಯ-ಸ್ಪರ್ಶ ಭದ್ರತಾ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯ ಬಳಿಕ ಬಿರ್ಲಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com