ಗುಜರಾತ್ ನಲ್ಲಿ ಗುಜರಿ ಸೇರಲಿದೆ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಭಾರತದ ಯುದ್ದ ನೌಕೆ ಐಎನ್ಎಸ್ ವಿರಾಟ್ 

ಭಾರತೀಯ ನೌಕಾಪಡೆಯಲ್ಲಿ ಸುದೀರ್ಘಾವಧಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯುದ್ಧ ನೌಕೆ ಐಎನ್ಎಸ್ ವಿರಾಟ್ ಗುಜರಾತ್ ನ ಭವ್ ನಗರದಲ್ಲಿ ಕಳಚಿ ಗುಜರಿಗೆ ಹಾಕಲಾಗುತ್ತದೆ. 
ಗುಜರಾತ್ ನಲ್ಲಿ ಗುಜರಿ ಸೇರಲಿದೆ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಭಾರತದ ಯುದ್ದ ನೌಕೆ ಐಎನ್ಎಸ್ ವಿರಾಟ್
ಗುಜರಾತ್ ನಲ್ಲಿ ಗುಜರಿ ಸೇರಲಿದೆ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಭಾರತದ ಯುದ್ದ ನೌಕೆ ಐಎನ್ಎಸ್ ವಿರಾಟ್

ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘಾವಧಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯುದ್ಧ ನೌಕೆ ಐಎನ್ಎಸ್ ವಿರಾಟ್ ಗುಜರಾತ್ ನ ಭವ್ ನಗರದಲ್ಲಿ ಕಳಚಿ ಗುಜರಿಗೆ ಹಾಕಲಾಗುತ್ತದೆ. 

ಮೂರು ವರ್ಷಗಳ ಹಿಂದೆ ನಿವೃತ್ತವಾಗಿದ್ದ ಐಎನ್ಎಸ್ ವಿರಾಟ್ ನ್ನು ಮುಂಬೈ ನಿಂದ ಗುಜರಾತ್ ನ ಅಲಾಂಗ್ ಗೆ ಕೊಂಡೊಯ್ದು ಮುಂದಿನ ತಿಂಗಳು ಕಳಚಿ ಗುಜರಿಗೆ ಹಾಕಲಾಗುತ್ತದೆ. 
 
1959 ರಲ್ಲಿ ಪೂರ್ಣಗೊಂಡು ಬ್ರಿಟನ್ ನ ರಾಯಲ್ ನೇವಿಯಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಹೆಚ್ಎಂಎಸ್ ಹರ್ಮಿಸ್ ನ್ನು ಅಲ್ಲಿನ ನೌಕಾಪಡೆ 1984 ರಲ್ಲಿ ಹೆಚ್ಎಂಎಸ್ ಹರ್ಮಿಸ್ ನ್ನು ಸೇವೆಯಿಂದ ನಿವೃತ್ತಿಗೊಳಿಸಿತ್ತು. ನಂತರ 1987 ಮೇ. 12 ರಂದು ಭಾರತೀಯ ನೌಕಾ ಪಡೆ ಅದನ್ನು ಸೇವೆಗೆ ನಿಯುಕ್ತಿಗೊಳಿಸಿತ್ತು. 

ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ 1989 ರಲ್ಲಿ ನಡೆದ ಆಪರೇಷನ್ ಜುಪಿಟರ್, 1999 ರ ಕಾರ್ಗಿಲ್ ಯುದ್ಧದ ವೇಳೆ ನಡೆದ ಆಪರೇಷನ್ ವಿಜಯ್ ಕಾರ್ಯಾಚರಣೆಗಳಲ್ಲಿ  ಪ್ರಮುಖ ಪಾತ್ರ ವಹಿಸಿದ್ದ ಐಎನ್ಎಸ್ ವಿರಾಟ್ ಯುದ್ಧ ನೌಕೆ ಸೇವೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಹೊಂದಿದ್ದು, ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com