ಗುಲಾಂ ನಬಿ ಆಜಾದ್ ಉಚ್ಚಾಟನೆಗೆ ಪಕ್ಷದಲ್ಲೇ ಹೆಚ್ಚಿದ ಒತ್ತಡ

ಎಐಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಧ್ವನಿ ಎತ್ತಿದ್ದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂಬ ಒತ್ತಡ ಪಕ್ಷದಲ್ಲೇ ಹೆಚ್ಚಾಗುತ್ತಿದೆ.

Published: 29th August 2020 03:31 PM  |   Last Updated: 29th August 2020 03:31 PM   |  A+A-


Gulam nabi azad

ಗುಲಾಂ ನಬಿ ಆಜಾದ್

Posted By : Srinivas Rao BV
Source : Online Desk

ಲಕ್ನೋ: ಎಐಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಧ್ವನಿ ಎತ್ತಿದ್ದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂಬ ಒತ್ತಡ ಪಕ್ಷದಲ್ಲೇ ಹೆಚ್ಚಾಗುತ್ತಿದೆ.

ಗಾಂಧಿಯೇತರ ಕುಟುಂಬದವರಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಪತ್ರ ಬರೆದಿದ್ದ  ಆಜಾದ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ನಸೀಬ್ ಪಠಾಣ್ ಒತ್ತಾಯಿಸಿದ್ದಾರೆ.

ಪಕ್ಷದ ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಕಹಳೆ ಮೊಳಗಿಸಲು ಮುನ್ನುಡಿ ಬರೆದಿರುವ ಆಜಾದ್ ಅವರನ್ನು ಪಕ್ಷದಿಂದ ಹೊರಹಾಕುವುದೇ  ಸರಿ ಎಂದು ಅವರು ಹೇಳಿದ್ದಾರೆ. 

2017ರ ಉತ್ತರಪ್ರದೇಶ ಚುನಾವಣೆಯ ಉಸ್ತುವಾರಿಯನ್ನು ಗುಲಾಂ ನಬಿ ಆಜಾದ್ ಅವರು ವಹಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾದ ನಂತರ ಅವರು ತಮ್ಮ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp