ಎನ್ಇಇಟಿ, ಜೆಇಇ ಪರೀಕ್ಷೆಗಳು: ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ, ವಸತಿ ವ್ಯವಸ್ಥೆ ಕಲ್ಪಿಸಲಿರುವ ಒಡಿಶಾ ಸರ್ಕಾರ

ಎನ್ಇಇಟಿ-ಜೆಇಇ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ. 

ಒಡಿಶಾ ಮುಖ್ಯಕಾರ್ಯದರ್ಶಿ ಅಸಿತ್ ತ್ರಿಪಾಠಿ ಸರ್ಕಾರದ ಪರವಾಗಿ ಈ ಆದೇಶ ಹೊರಡಿಸಿದ್ದು, ಸವಲತ್ತು ಹೊಂದಿರದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದ್ದಾರೆ.

ಕೋವಿಡ್-19 ಲಾಕ್ ಡೌನ್ ನಿಂದಾಗಿ ಸಂಚರಿಸುವುದಕ್ಕೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ಯಾವುದೇ ಅನನುಕೂಲವಾಗದಂತೆ ಎಚ್ಚರ ವಹಿಸಲಾಗುವುದು ಎಂದು ತ್ರಿಪಾಠಿ ಭರವಸೆ ನೀಡಿದ್ದಾರೆ. 

ವಿದ್ಯಾರ್ಥಿಗಳು ತಮ್ಮ ಪ್ರದೇಶದಲ್ಲಿರುವ ಐಟೈ ನೋಡಲ್ ಪ್ರಾಂಶುಪಾಲರನ್ನು ಉಚಿತ ಸಾರಿಗೆ, ವಸತಿ ವ್ಯವಸ್ಥೆಗೆ ಆ.31 ರೊಳಗಾಗಿ ಸಂಪರ್ಕಿಸಬಹುದಾಗಿದೆ. ಸೆ.1-6 ಹಾಗೂ ಸೆ.13 ವರೆಗೆ ಅನುಕ್ರಮವಾಗಿ ಜೆಇಇ ಮುಖ್ಯಪರೀಕ್ಷೆ ಹಾಗೂ ಎನ್ಇಇಟಿ ಪರೀಕ್ಷೆಗಳು ನಿಗದಿಯಾಗಿದೆ. 
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com