ರಷ್ಯಾದಲ್ಲಿ ಸೆಪ್ಟೆಂಬರ್ ನಲ್ಲಿ ಮಿಲಿಟರಿ ಕಸರತ್ತು ಪ್ರದರ್ಶನ:ಕೊನೆ ಕ್ಷಣದಲ್ಲಿ ಭಾಗವಹಿಸುವಿಕೆಯಿಂದ ಹಿಂದೆ ಸರಿದ ಭಾರತ

ಸೆಪ್ಟೆಂಬರ್ ಮಧ್ಯಭಾಗದಲ್ಲಿ ರಷ್ಯಾದಲ್ಲಿ ನಿಗದಿಯಾಗಿರುವ ಬಹುರಾಷ್ಟ್ರೀಯ ಮಿಲಿಟರಿ ಕಸರತ್ತಿನಲ್ಲಿ ಭಾಗವಹಿಸುವ ನಿರ್ಧಾರದಿಂದ ಭಾರತ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಪ್ಟೆಂಬರ್ ಮಧ್ಯಭಾಗದಲ್ಲಿ ರಷ್ಯಾದಲ್ಲಿ ನಿಗದಿಯಾಗಿರುವ ಬಹುರಾಷ್ಟ್ರೀಯ ಮಿಲಿಟರಿ ಕಸರತ್ತಿನಲ್ಲಿ ಭಾಗವಹಿಸುವ ನಿರ್ಧಾರದಿಂದ ಭಾರತ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದೆ.

ಸೆಪ್ಟೆಂಬರ್ 15ರಿಂದ 26ರವರೆಗೆ ರಷ್ಯಾದ ಅಸ್ಟ್ರಖಾನ್ ವಲಯದಲ್ಲಿ ನಿಗದಿಯಾಗಿರುವ ಕವ್ಕಾಝ್ 2020 ಕಾರ್ಯತಂತ್ರ ಕಮಾಂಡ್ ಪೋಸ್ಟ್ ಕಸರತ್ತಿನಲ್ಲಿ ಭಾಗವಹಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ಭಾರತ ಮತ್ತು ಚೀನಾ ಸೇನೆ ಮಧ್ಯೆ ಇರುವ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಚೀನಾ ಮತ್ತು ಪಾಕಿಸ್ತಾನ ಸೇನಾಪಡೆಯೊಂದಿಗೆ ಒಟ್ಟಾಗಿ ಕಸರತ್ತು ನಡೆಸಲು ಭಾರತ ಒಪ್ಪದಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಚಿವಾಲಯ, ಕೊರೋನಾ ಸಾಂಕ್ರಾಮಿಕ ಮತ್ತು ಕಸರತ್ತಿನಲ್ಲಿನ ಸಾಂದರ್ಭಿಕ ಕ್ಲಿಷ್ಟ ಪರಿಸ್ಥಿತಿಗಳಿಂದಾಗಿ ಕವ್ಕಾಝ್-2020 ಮಿಲಿಟರಿ ಕಸರತ್ತಿನಲ್ಲಿ ಭಾರತ ಮಿಲಿಟರಿ ತಂಡವನ್ನು ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ಈ ಮಿಲಿಟರಿ ಕಸರತ್ತಿನಲ್ಲಿ ಇರಾನ್, ಟರ್ಕಿ, ಸಿರಿಯಾ, ಸೆಂಟ್ರಲ್ ಏಷ್ಯನ್ ನೇಷನ್ಸ್ ಮತ್ತು ಎಲ್ಲಾ ಇತರ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳು ಸೇರಿ 19 ದೇಶಗಳ 12,500 ಪಡೆಗಳು ಭಾಗವಹಿಸಲಿವೆ. ಚೀನಾ ಸರ್ಕಾರ ಕೂಡ ತನ್ನ ಸೇನೆಯ 3 ಫ್ರಿಗೇಟ್ ಗಳನ್ನು ಕಳುಹಿಸಿಕೊಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com