ದೆಹಲಿ: ಡಿಸಿ ಕಚೇರಿಯ ಮೇಲೆ ಖಲಿಸ್ಥಾನ್ ಧ್ವಜ ಹಾರಿಸಿದ ಇಬ್ಬರ ಬಂಧನ

 ದೆಹಲಿ ಪೊಲೀಸ್ ವಿಶೇಷ ಪಡೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಎಂಬ ನಿಷೇಧಿತ  ಸಂಘಟನೆಯ ಇಬ್ಬರು ಸದಸ್ಯರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಿದೆ. 
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಪಡೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಎಂಬ ನಿಷೇಧಿತ  ಸಂಘಟನೆಯ ಇಬ್ಬರು ಸದಸ್ಯರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಿದೆ. 

ಇಂಗರ್‌ಜೀತ್ ಗಿಲ್ ಮತ್ತು ಜಸ್ಪಾಲ್ ಸಿಂಗ್ ಎಂದು ಗುರುತಿಸಲ್ಪಟ್ಟ ಇವರಿಬ್ಬರೂ  ಪಂಜಾಬಿನ ಮೊಗಾ ಪಟ್ಟಣದ ಮೂಲದವರು.  ನಿಷೇಧಿತ ಸಂಘಟನೆ  ಸಿಖ್ಸ್ ಫಾರ್ ಜಸ್ಟೀಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ.

ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಇಬ್ಬರೂ ಖಲಿಸ್ತಾನ್ ಧ್ವಜವನ್ನು ಪಂಜಾಬ್‌ನ ಮೊಗಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮೇಲ್ಛಾವಣಿಯಲ್ಲಿ ಹಾರಿಸಿದ್ದರು, ಭಾರತೀಯ ಧ್ವಜವನ್ನು ಅಪವಿತ್ರಗೊಳಿಸಿದ್ದರು ಎಂಬ ಆರೋಪ ಇವರ ಮೇಲಿದೆ.

ಉಗ್ರ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿರುವ ಬಗ್ಗೆ ದೆಹಲಿ ಪೊಲೀಸರು ಮೊಗಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೊಗಾ ಎಸ್‌ಎಸ್‌ಪಿ ಹರ್ಮನ್‌ಬೀರ್ ಸಿಂಗ್ ಗಿಲ್ ತಿಳಿಸಿದ್ದಾರೆ. ರಕ್ಷಣಾ ವಾರಂಟ್‌ನಲ್ಲಿ ಆರೋಪಿಗಳಿಬ್ಬರನ್ನೂ  ವಾಪಸ್ ಕರೆತರಲು ಪೊಲೀಸ್ ಅಧಿಕಾರಿಗಳು ದೆಹಲಿಗೆ ತೆರಳಿದ್ದಾರೆ ಎಂದು ಅವರು ಹೇಳಿದರು.

ಘಟನೆ ಸಂಬಂಧ ಮೂರನೇ ಆರೋಪಿ ಆಕಾಶ್‌ದೀಪ್ ಸಿಂಗ್ ಅವರನ್ನು ಈಗಾಗಲೇ ಆಗಸ್ಟ್ 20 ರಂದು ಮೊಗಾ ಪೊಲೀಸರು ಬಂಧಿಸಿದ್ದಾರೆ.   ಸಿಂಗ್. ಧ್ವಜವನ್ನು ಹಾರಿಸುವ ವೀಡಿಯೊವನ್ನು ಮಾಡಲು ಆಕಾಶ್‌ದೀಪ್‌ಗೆ ಸೂಚನೆ ನೀಡಲಾಯಿತು ಮತ್ತು ಇತರ ಇಬ್ಬರು ಖಲ್ಸ್ತಾನಿ ಧ್ವಜವನ್ನು ಡಿಸಿ ಕಚೇರಿಯ ಮೇಲ್ಛಾವಣಿಯಲ್ಲಿ ಹಾರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com