ಮಹಾಮಳೆಗೆ ಮಧ್ಯಪ್ರದೇಶ ತತ್ತರ: 14 ಮಂದಿ ಬಲಿ, ಹೊಸದಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಯ್ತು!

ಮಹಾಮಳೆಗೆ ಮಧ್ಯಪ್ರದೇಶ ಅಕ್ಷರಶಃ ತತ್ತರಿದ್ದು 14 ಮಂದಿ ಬಲಿಯಾಗಿದ್ದಾರೆ. ಇನ್ನು ಹೊಸದಾಗಿ ನಿರ್ಮಿಸಿದ್ದ ಸೇತುವೆ ಸಹ ಕೊಚ್ಚಿ ಹೋಗಿದೆ. 
ಕೊಚ್ಚಿ ಹೋದ ಸೇತುವೆ
ಕೊಚ್ಚಿ ಹೋದ ಸೇತುವೆ

ಭೋಪಾಲ್: ಮಹಾಮಳೆಗೆ ಮಧ್ಯಪ್ರದೇಶ ಅಕ್ಷರಶಃ ತತ್ತರಿದ್ದು 14 ಮಂದಿ ಬಲಿಯಾಗಿದ್ದಾರೆ. ಇನ್ನು ಹೊಸದಾಗಿ ನಿರ್ಮಿಸಿದ್ದ ಸೇತುವೆ ಸಹ ಕೊಚ್ಚಿ ಹೋಗಿದೆ. 

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ 450 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು ಹೀಗಾಗಿ ಅಲ್ಲಿ ನೆಲೆಸಿದ್ದ ಸಾವಿರಾರು ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇನ್ನು ಹಲವು ನಡುಗಡ್ಡೆಗಳಲ್ಲಿ ಸಿಲುಕ್ಕಿದ್ದು ಅವರನ್ನು ರಕ್ಷಿಸಲು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ. 

ಇನ್ನು 2018ರಲ್ಲಿ ಸೇತುವೆ ನಿರ್ಮಾಣ ಆರಂಭಗೊಂಡಿದ್ದು ಕಳೆದ ಎರಡು ತಿಂಗಳ ಹಿಂದೆ ಪೂರ್ಣಗೊಂಡಿತ್ತು. ಸೇತುವೆ ಅಧಿಕೃತವಾಗಿ ಉದ್ಘಾಟನೆಯಾಗದಿದ್ದರೂ ಸಾರ್ವಜನಿಕೆ ಬಳಕೆಗೆ ಅನುವು ಮಾಡಿಕೊಡಲಾಗಿತ್ತು. ಆದರೆ ಈ ಸೇತುವೆ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದೆ. 

ಈ ಸೇತುವೆ ಸೋನ್ವಾರ ಮತ್ತು ಧನೋರಾ ಗ್ರಾಮಗಳನ್ನು ಸಂಪರ್ಕಿಸುವ ಸಲುವಾಗಿ ಈ ಸೇತುವೆ ನಿರ್ಮಿಸಲಾಗಿತ್ತು. 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com