ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ- ಸಲ್ಮಾನ್ ಖುರ್ಷಿದ್ 

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ  ಆತುರವೇನಿಲ್ಲ ಎಂದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.ಸೋನಿಯಾ ಗಾಂಧಿ ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಯಕತ್ವ ವಿಚಾರವನ್ನು ಬಗೆಹರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೋನಿಯಾ, ರಾಹುಲ್ ಗಾಂಧಿ
ಸೋನಿಯಾ, ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ ಎಂದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.ಸೋನಿಯಾ ಗಾಂಧಿ ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು,ನಾಯಕತ್ವ ವಿಚಾರವನ್ನು ಬಗೆಹರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಕ್ರಿಯ ಹಾಗೂ ಪೂರ್ಣ ಅವಧಿಯ ಅಧ್ಯಕ್ಷರು ಸೇರಿದಂತೆ ಸಾಂಸ್ಥಿಕ ಬದಲಾವಣೆ ಬಯಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಗುಂಪು ತಮ್ಮನ್ನು ಸಂಪರ್ಕಿಸಿದ್ದರೂ ತಾವು ಮಾತ್ರ ಸಹಿ ಹಾಕುತ್ತಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಗಾಂಧಿ ಕುಟುಂಬದ ಆಪ್ತರು ಆಗಿರುವ ಸಲ್ಮಾನ್ ಖುರ್ಷಿದ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಕ್ಷದೊಳಗೆ ಬದಲಾವಣೆಯಾಗದಿದ್ದರೆ ಹಲವು ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದಿಲ್ಲ ಎಂದು ಗುಲಾಂ ನಬಿ ಆಜಾದ್
ಸೇರಿದಂತೆ 23 ಮುಖಂಡರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಪಕ್ಷದ ವೇದಿಕೆಯೊಳಗೆ ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.

ನನ್ನಂತವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ  ನಾಯಕರಾಗಿದ್ದಾರೆ.ಆದ್ದರಿಂದ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ, ಅಧ್ಯಕ್ಷರು ಆಯ್ಕೆ ಯಾವಾಗ ಆಗಬೇಕೋ ಆಗ ಆಗಲಿದೆ. ಸ್ವರ್ಗವೇನೂ ಕೆಳಗೆ ಬರುವುದಿಲ್ಲ, ಇದಕ್ಕೆ ಆತುರ ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

ನಮಗೆ ಅಲ್ಪಾವಧಿಯ ಅಧ್ಯಕ್ಷರು ಬೇಕಾಗಿಲ್ಲ, ಪೂರ್ಣ ಅವಧಿಯ ಅಧ್ಯಕ್ಷರು ಬೇಕು ಆದರೆ, ಪೂರ್ಣ ಅವಧಿಯ ಅಧ್ಯಕ್ಷರು ಹಂಗಾಮಿ
ಅಧ್ಯಕ್ಷರಾಗಿದ್ದು, ಸಾಮಾನ್ಯ ವ್ಯಕ್ತಿಗಳು ಹಂಗಾಮಿ ಅಧ್ಯಕ್ಷರಾಗಿ ಇರಲ್ಲ,  ಸೋನಿಯಾ ಗಾಂಧಿ ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿ
ಸೇವೆ ಸಲ್ಲಿಸಿದ್ದಾರೆ. ನಾವು ನಂಬಿಕೆ ಮಾತ್ರ ಇಡಬೇಕಾಗಿದೆ. ಸೋನಿಯಾ ಗಾಂಧಿ ಅವರು ಸೂಕ್ತ ಸಂದರ್ಭದಲ್ಲಿ ಈ ಸಂಬಂಧ
ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com