ಯು ಟ್ಯೂಬ್ ನಲ್ಲಿ 5 ಲಕ್ಷದ 60 ಸಾವಿರ ಡಿಸ್ ಲೈಕ್ ಪಡೆದ ಪ್ರಧಾನಿ ಮೋದಿ 'ಮನ್ ಕೀ ಬಾತ್' ವಿಡಿಯೋ!

ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ 'ಮನ್ ಕೀ ಬಾತ್' ಎಪಿಸೋಡ್ ವಿಡಿಯೋ ಬಿಜೆಪಿಯ ಯೂ ಟ್ಯೂಬ್ ಚಾನೆಲ್ ನಲ್ಲಿ 5 ಲಕ್ಷದ 60 ಸಾವಿರ  ಡಿಸ್ ಲೈಕ್ ಪಡೆದುಕೊಂಡಿದೆ.
ನರೇಂದ್ರ ಮೋದಿ ಮನ್ ಕೀ ಬಾತ್ ವಿಡಿಯೋ
ನರೇಂದ್ರ ಮೋದಿ ಮನ್ ಕೀ ಬಾತ್ ವಿಡಿಯೋ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ 'ಮನ್ ಕೀ ಬಾತ್' ಎಪಿಸೋಡ್ ವಿಡಿಯೋ ಬಿಜೆಪಿಯ ಯೂ ಟ್ಯೂಬ್ ಚಾನೆಲ್ ನಲ್ಲಿ 5 ಲಕ್ಷದ 60 ಸಾವಿರ  ಡಿಸ್ ಲೈಕ್ ಪಡೆದುಕೊಂಡಿದೆ. ಮೋದಿ ಅವರ ಆಗಸ್ಟ್ ತಿಂಗಳ ಆಕಾಶವಾಣಿ ಕಾರ್ಯಕ್ರಮ ಬಿಜೆಪಿಯ ಯು ಟ್ಯೂಬ್ ಚಾನೆಲ್ ನಲ್ಲಿ ಅತಿ ಹೆಚ್ಚು ಡಿಸ್ ಲೈಕ್ ಪಡೆದ ವಿಡಿಯೋಗಳಲ್ಲಿ ಒಂದಾಗಿದೆ. 

68 ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ  ಜೆಇಇ ಮತ್ತು ನೀಟ್ ಪರೀಕ್ಷೆ ಬಗ್ಗೆ ಪ್ರಧಾನಿ ಪ್ರಸ್ತಾಪ ಮಾಡದಿರುವುದನ್ನು ಟ್ವೀಟರ್ ಹಾಗೂ ಯು ಟ್ಯೂಬ್ ನಲ್ಲಿ ಅನೇಕ ಮಂದಿ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಉದ್ಯೋಗ, ಸಣ್ಣ ಕೈಗಾರಿಕೆಗಳು, ಶಿಕ್ಷಣದ ಬಗ್ಗೆ ಮಾತನಾಡಿಲ್ಲ, ನೀವು ದೇಶದ ಪ್ರಧಾನ ಮಂತ್ರಿ ನಮಗೆ ಮನ್ ಕಿ ಬಾತ್ ಅಗತ್ಯವಿಲ್ಲ, ನಾವು ನಿಮ್ಮನ್ನು ಆಯ್ಕೆ ಮಾಡಿದ್ದು, ಕರ್ತವ್ಯವನ್ನು ಪೂರ್ಣಗೊಳಿಸಬೇಕಾದ ಅಗತ್ಯವಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಅವರೇ ಸಾಕು, ಸಾಕು, ಬರೀ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಎಂದು ಮತ್ತೋಬ್ಬರು ಬರೆದಿದ್ದಾರೆ.

ಜಿಇಇ ಮತ್ತು ನೀಟ್ ಪರೀಕ್ಷೆ ಮುಂದೂಡಿರುವುದನ್ನು ಬಿಟ್ಟು ಆಟಿಕೆಗಳು, ಶ್ವಾನ ತಳಿಗಳ ಬಗ್ಗೆ ಮಾತನಾಡಿರುವುದಕ್ಕೆ ಅನೇಕ ಮಂದಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಈ ವಿಡಿಯೋ  2,182,558 ವೀಕ್ಷಣೆ ಪಡೆದಿದ್ದು, 83  ಸಾವಿರ ಲೈಕ್ ಹಾಗೂ 5 ಲಕ್ಷದ 60 ಸಾವಿರ ಡಿಸ್ ಲೈಕ್ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com