ಹೆತ್ತ ತಾಯಿಯ ಮೃತದೇಹವನ್ನು ಪುಟ್ ಪಾತ್ ನಲ್ಲಿ ಬಿಟ್ಟುಹೋದ ಮಗ!

70 ವರ್ಷದ ವೃದ್ಧ ತಾಯಿಯ ಮೃತದೇಹವನ್ನು ಮಗನೊಬ್ಬ ಪುಟ್ ಪಾತ್ ನಲ್ಲಿಯೇ ಬಿಟ್ಟು ಹೋದ  ಘಟನೆ ಇಲ್ಲಿನ ಬಂಜಾರ ಹಿಲ್ ಪ್ರದೇಶದಲ್ಲಿ ನಡೆದಿದೆ.

Published: 31st August 2020 12:35 PM  |   Last Updated: 31st August 2020 12:39 PM   |  A+A-


Casual_Image1

ಸಾಂದರ್ಭಿಕ ಚಿತ್ರ

Posted By : Nagaraja AB
Source : Online Desk

ಹೈದ್ರಾಬಾದ್: 70 ವರ್ಷದ ವೃದ್ಧ ತಾಯಿಯ ಮೃತದೇಹವನ್ನು ಮಗನೊಬ್ಬ ಪುಟ್ ಪಾತ್ ನಲ್ಲಿಯೇ ಬಿಟ್ಟು ಹೋದ ಘಟನೆ ಇಲ್ಲಿನ ಬಂಜಾರ ಹಿಲ್ ಪ್ರದೇಶದಲ್ಲಿ ನಡೆದಿದೆ.

ಜ್ವರದಿಂದಾಗಿ ಮಹಿಳೆ ಮೃತಪಟ್ಟಿದ್ದು, ಬ್ಲಾಂಕೆಟ್ ವೊಂದರಲ್ಲಿ ಮೃತದೇಹವನ್ನು ಸುತ್ತಿ ಪುಟ್ ಪಾತ್ ನಲ್ಲಿಯೇ  ಬಿಟ್ಟು ಸುಪುತ್ರ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರಿಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆಯಲ್ಲಿ  ಮಹಿಳೆಯನ್ನು ಭಿಕ್ಷೆ ಬೇಡಲು ಬಳಸಲಾಗುತಿತ್ತು ಅಪಾರ್ಟ್ ಮೆಂಟ್ ವೊಂದರ ಕಾಂಪ್ಲೆಕ್ಸ್ ನಲ್ಲಿ ವಾಚ್ ಮನ್ ಆಗಿದ್ದ ಮಗನೊಂದಿಗೆ ಆಕೆ ವಾಸಿಸುತ್ತಿದ್ದಳು ಎಂಬುದು ತಿಳಿದುಬಂದಿದೆ.

ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೃದ್ಧ ಮಹಿಳೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಆಕೆ ಮೃತಪಟ್ಟ ನಂತರ ಅಂತ್ಯಸಂಸ್ಕಾರ ಮಾಡಲು ಹಣ ಇಲ್ಲದ ಕಾರಣ ಬ್ಲಾಂಕೆಟ್ ನಲ್ಲಿ ಸುತ್ತಿ ಪುಟ್ ಪಾತ್ ನಲ್ಲಿ ಮೃತದೇಹ ಬಿಟ್ಟು ಪರಾರಿಯಾಗಿದ್ದಾಗಿ ಮಗ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾರೆ.ಆಕೆ ಜ್ವರದಿಂದ ಮೃತಪಟ್ಟಿದ್ದರಿಂದ ಕಟ್ಟಡದ ಮಾಲೀಕರಿಂದಲೂ ತೊಂದರೆ ಎದುರಿದ್ದಾಗಿ ಆತ ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp