ಮಾರ್ಚ್-ಏಪ್ರಿಲ್ ವೇಳೆಗೆ ಕೋವಿಶೀಲ್ಡ್ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ: ಆಕ್ಸ್ಫರ್ಡ್ ಲಸಿಕೆ ಕುರಿತು ಸೆರಮ್ ಇನ್ಸ್ಟಿಟ್ಯೂಟ್

ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಲಸಿಕೆಯನ್ನು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮಾರ್ಚ್-ಏಪ್ರಿಲ್ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಮಾಡಲಿದೆ.

Published: 01st December 2020 11:23 AM  |   Last Updated: 01st December 2020 12:40 PM   |  A+A-


Covishield in open market after March-April: Serum Institute of India on Oxford vaccine

ಮಾರ್ಚ್-ಏಪ್ರಿಲ್ ವೇಳೆಗೆ ಕೋವಿಶೀಲ್ಡ್ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ: ಸೆರಮ್ ಇನ್ಸ್ಟಿಟ್ಯೂಟ್

Posted By : Srinivas Rao BV
Source : The New Indian Express

ನವದೆಹಲಿ: ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಲಸಿಕೆಯನ್ನು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮಾರ್ಚ್-ಏಪ್ರಿಲ್ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಮಾಡಲಿದೆ.

ಎಸ್ಐಐ ಕೋವಿಶೀಲ್ಡ್ ಉತ್ಪಾದನೆ ಮಾಡುವುದಕ್ಕಾಗಿ ಪಾಲುದಾರಿಕೆಯನ್ನು ಹೊಂದಿದ್ದು, 1,600 ಸ್ವಯಂ ಸೇವಕರಿಗೆ 2, 3ನೇ ಹಂತದ ಲಸಿಕೆ ಟ್ರಯಲ್ ನ್ನು ಸ್ಪಾನ್ಸರ್ ಮಾಡುತ್ತಿದೆ.

ಸೆರಮ್ ಇನ್ಸ್ಟಿಟ್ಯೂಟ್ ಗೆ ಪ್ರಧಾನಿ ಭೇಟಿ ನೀಡಿದ ಬಳಿಕ ಲಸಿಕೆಯನ್ನು ತುರ್ತು ಬಳಕೆಗೆ ಡ್ರಗ್ಸ್ ನಿಯಂತ್ರಕದಿಂದ ಅನುಮತಿ ಪಡೆಯುವುದಾಗಿ ಎಸ್ಐಐ ಸಿಇಒ ಆದಾರ್ ಪೂನಾವಾಲ ಘೋಷಿಸಿದ್ದರು.

ಜೂನ್-ಜುಲೈ 2021 ರ ವೇಳೆಗೆ 400 ಮಿಲಿಯನ್ ಡೋಸ್ ಗಳಷ್ಟು ಲಸಿಕೆ ತಯಾರಿಸುವುದಕ್ಕೆ ಗುರಿ ಹೊಂದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಡೋಸ್ ಲಸಿಕೆಗೆ 2-3 ಡಾಲರ್ ನಷ್ಟಾಗುತ್ತದೆ ಎಂದು ಎಸ್ಐಐ ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp